ದಾವಣಗೆರೆ : ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ನೀರಿನ ತೊಟ್ಟಿಗೆ ಬಿದ್ದು 6 ವರ್ಷದ ಬಾಲಕ ಸಾವನ್ನ(Death)ಪ್ಪಿರುವ ಘಟನೆ ನಡೆದಿದೆ.
ಮೃತ ಬಾಲಕನನ್ನು ಅವಾಜ್ ಖಾನ್ (6) ಎಂದು ಗುರುತಿಸಲಾಗಿದ್ದು, ಸಂತೆಬೆನ್ನೂರು (Santhebennur)ಗ್ರಾಮದ ಫುಟ್‌ವೇರ್ ಅಂಗಡಿ ಮಾಲೀಕ ಅಪ್ತಾಬ್ ಖಾನ್ (Aptab Khan,)ಅವರ ಪುತ್ರ. ಮೂತ್ರ ವಿಸರ್ಜನೆಗಾಗಿ ಹೊರಟಿದ್ದ ವೇಳೆ ಆಯತಪ್ಪಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕೆಲ ಹೊತ್ತಿನ ಬಳಿಕ ತೊಟ್ಟಿಯಲ್ಲಿ ಚಪ್ಪಲಿ ತೇಲಾಡುತ್ತಿರುವುದು ಗಮನಕ್ಕೆ ಬಂದು, ಹುಡುಕಾಟ ನಡೆಸಿದಾಗ ಬಾಲಕ ಮೃತಪಟ್ಟಿರುವುದು ಪತ್ತೆಯಾಗಿದೆ.
ಸಿಸಿಟಿವಿ ಕ್ಯಾಮರದಲ್ಲಿ ಬಾಲಕನ ಕೊನೆಯ ಕ್ಷಣಗಳು ದಾಖಲಾಗಿದ್ದು, ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆ (Police Station)ಯಲ್ಲಿ ಪ್ರಕರಣ ದಾಖಲಾಗಿದೆ.
