S Shorts

Assembly High Drama | ನೂಕುನುಗ್ಗಲಿನಲ್ಲಿ ಹರಿದ ಬಿ.ಕೆ. ಹರಿಪ್ರಸಾದ್ ಬಟ್ಟೆ; ಬಿಜೆಪಿಯವರೇ ನನ್ನ ಬಟ್ಟೆ ಹರಿದಿದ್ದು ಎಂದ ಕೈ ನಾಯಕ!

Assembly High Drama | ನೂಕುನುಗ್ಗಲಿನಲ್ಲಿ ಹರಿದ ಬಿ.ಕೆ. ಹರಿಪ್ರಸಾದ್ ಬಟ್ಟೆ; ಬಿಜೆಪಿಯವರೇ ನನ್ನ ಬಟ್ಟೆ ಹರಿದಿದ್ದು ಎಂದ ಕೈ ನಾಯಕ!
Author: Meghana Gowda
Posted By: Meghana Gowda
Updated: Jan 22, 2026 | 7:06 AM

ಬೆಂಗಳೂರು: ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು (Governor) ಭಾಷಣ ಮಾಡುತ್ತಿದ್ದ ವೇಳೆ ಸದನದಲ್ಲಿ ಭಾರೀ ಕೋಲಾಹಲ. ರಾಜ್ಯಪಾಲರು ತಮ್ಮ ಭಾಷಣವನ್ನು ಮೊಟಕುಗೊಳಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕರು ಮುತ್ತಿಗೆ ಹಾಕಲು ಯತ್ನಿಸಿದಾಗ ಅಹಿತಕರ ಘಟನೆ ಜರುಗಿದೆ.

ಸದನದಲ್ಲಿ ನಡೆದದ್ದೇನು?

ರಾಜ್ಯಪಾಲರು ಸರ್ಕಾರದ ಪೂರ್ಣ ಭಾಷಣ ಓದದೆ ಮೊಟಕುಗೊಳಿಸಿದ್ದನ್ನು ವಿರೋಧಿಸಿ ಬಿ.ಕೆ. ಹರಿಪ್ರಸಾದ್ (MLC BK Hariprasad) ಅವರು ರಾಜ್ಯಪಾಲರ ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ನೂಕುನುಗ್ಗಲು ಉಂಟಾಯಿತು. ಈ ಗದ್ದಲದ ನಡುವೆ ಬಿ.ಕೆ. ಹರಿಪ್ರಸಾದ್ ಅವರ ಅಂಗಿ ಹರಿದುಹೋಗಿದೆ.

ಘಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್, “ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಲಾಗಿದೆ. ಬಿಜೆಪಿ ಸದಸ್ಯರೇ ಸಂಚು ರೂಪಿಸಿ ನನ್ನ ಬಟ್ಟೆ ಹರಿದಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.

ಅಧಿವೇಶನದ ಆರಂಭದಲ್ಲೇ ಇಂತಹ ಸಂಘರ್ಷ ಏರ್ಪಟ್ಟಿರುವುದು ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದ್ದು, ಸದನವು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳ್ಳುವ ಮುನ್ಸೂಚನೆ ಸಿಕ್ಕಿದೆ.