S Shorts

‘ಕುರ್ಚಿ’ ಕದನಕ್ಕೆ ತಾತ್ಕಾಲಿಕ ಬ್ರೇಕ್: CM-DCM ಬಣದ ಶಾಸಕರಿಗೆ ಎದುರಾಯ್ತು ಹೊಸ ಟೆನ್ಷನ್!

‘ಕುರ್ಚಿ’ ಕದನಕ್ಕೆ ತಾತ್ಕಾಲಿಕ ಬ್ರೇಕ್: CM-DCM ಬಣದ ಶಾಸಕರಿಗೆ ಎದುರಾಯ್ತು ಹೊಸ ಟೆನ್ಷನ್!
Author: Meghana Gowda
Posted By: Meghana Gowda
Updated: Dec 1, 2025 | 4:55 AM

ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಮುಖ್ಯಮಂತ್ರಿ (CM) ಸ್ಥಾನದ ಕುರಿತು ನಡೆಯುತ್ತಿದ್ದ ಜಟಾಪಟಿಗೆ ಕಾಂಗ್ರೆಸ್ ಹೈಕಮಾಂಡ್ (Congress High Command) ತಾತ್ಕಾಲಿಕವಾಗಿ ತೆರೆ ಎಳೆದಿದೆ. ಆದರೆ, ಈ ಬೆಳವಣಿಗೆಯಿಂದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರ ಬಣಗಳಲ್ಲಿದ್ದ ಶಾಸಕರು (MLAs) ಇದೀಗ ಅತಂತ್ರ ಪರಿಸ್ಥಿತಿ (Awkward situation)ಎದುರಿಸುವಂತಾಗಿದೆ.

 ಬಣದ ಶಾಸಕರಿಗೆ ಮುಜುಗರ

ನಾಯಕತ್ವ ಬದಲಾವಣೆ ವಿಚಾರದಲ್ಲಿ ಒಂದು ಕಡೆ ಡಿಕೆಶಿಗೆ ಸಿಎಂ ಸ್ಥಾನ ನೀಡುವಂತೆ ದೆಹಲಿಯಲ್ಲಿ ವರಿಷ್ಠರ ಮುಂದೆ ಲಾಬಿ ಮಾಡಿದ್ದ ಶಾಸಕರು, ಮತ್ತೊಂದೆಡೆ ಸಿದ್ದರಾಮಯ್ಯನವರೇ ಮುಂದುವರಿಯಬೇಕು ಎಂದು ಪಟ್ಟು ಹಿಡಿದಿದ್ದ ಸಿಎಂ ಬಣದ ಶಾಸಕರು, ಇದೀಗ ಇಬ್ಬರೂ ನಾಯಕರನ್ನು ಎದುರಿಸಲು ತೀವ್ರ ಮುಜುಗರಕ್ಕೆ (Awkwardness) ಒಳಗಾಗಿದ್ದಾರೆ.

ಡಿಕೆಶಿ ಬಣದ ಶಾಸಕರಿಗೆ ಸಿದ್ದರಾಮಯ್ಯನವರ ಎದುರು ಹೋಗುವುದಕ್ಕೆ ತೀವ್ರ ಟೆನ್ಷನ್ ಎದುರಾಗಿದೆ. ಹಾಗೆ ಸಿದ್ದರಾಮಯ್ಯನವರ ಪರ ಇದ್ದ ಶಾಸಕರಿಗೆ ಡಿಕೆಶಿ ಅವರನ್ನು ಎದುರಿಸುವುದು ಹೇಗೆ ಎನ್ನುವ ಗೊಂದಲ ಮತ್ತು ಮುಜುಗರ ಶುರುವಾಗಿದೆ.

ಇದುವರೆಗೂ ‘ಒಂದೇ ಪಕ್ಷ, ಒಂದೇ ನಾಯಕತ್ವ’ ಎಂದು ಹೇಳಿಕೊಂಡು ಬಂದಿದ್ದರೂ, ಆಂತರಿಕವಾಗಿ ಬಣ ರಾಜಕೀಯದಲ್ಲಿ ತೊಡಗಿದ್ದ ಶಾಸಕರು ಈಗ ನಾಯಕರೊಂದಿಗೆ ಮತ್ತೆ ಮೊದಲಿನಂತೆ ಮಾತನಾಡುತ್ತಾರಾ? ಅಥವಾ ಅಧಿವೇಶನದಲ್ಲಿ ನಾಯಕರ ಎದುರು ಅತಂತ್ರ ಪರಿಸ್ಥಿತಿ ಎದುರಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಚಳಿಗಾಲದ ಅಧಿವೇಶನ (Winter Session) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ (CM Siddaramaiah) ಮತ್ತು ಡಿಕೆ ಶಿವಕುಮಾರ್ (D.K. Shivakumar) ಇಬ್ಬರೂ ಒಗ್ಗಟ್ಟಿನ ಹೋರಾಟಕ್ಕೆ ಸಜ್ಜಾಗಿದ್ದಾರೆ. ಆದರೆ, ಶಾಸಕರು ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ಒಟ್ಟಿಗೆ ಎದುರಿಸೋದು ಹೇಗೆ ಎಂಬ ಗೊಂದಲದಲ್ಲಿದ್ದಾರೆ.

ಸಿದ್ದು ಬಣ ಡಿ.ಕೆ. ಶಿವಕುಮಾರ್ ಬಣ
ಸತೀಶ್ ಜಾರಕಿಹೊಳಿ (ಸಚಿವ) ಚಲುವರಾಯಸ್ವಾಮಿ (ಸಚಿವ)
ಬೈರತಿ ಸುರೇಶ್ (ಸಚಿವ) ನಯನಾ ಮೊಟಮ್ಮ (ಶಾಸಕಿ)
ಡಾ.ಜಿ. ಪರಮೇಶ್ವರ್ (ಸಚಿವ) ಕದಲೂರು ಉದಯ್ (ಶಾಸಕ)
ಹೆಚ್.ಸಿ. ಮಹದೇವಪ್ಪ (ಸಚಿವ) ಕುಣಿಗಲ್ ರಂಗನಾಥ್ (ಶಾಸಕ)
ಸಂತೋಷ್ ಲಾಡ್ (ಸಚಿವ) ಹೆಚ್.ಸಿ. ಬಾಲಕೃಷ್ಣ (ಶಾಸಕ)
ಕೆ.ಎನ್. ರಾಜಣ್ಣ (ಮಾಜಿ ಸಚಿವ) ಇಕ್ಬಾಲ್ ಹುಸೇನ್ (ಶಾಸಕ)