S Shorts

Sex Scandal: ಮುಜುಗರ ತಪ್ಪಿಸಿಕೊಳ್ಳೋಕೆ VRS ತಗೊಳ್ತಾರ DGP?

Sex Scandal: ಮುಜುಗರ ತಪ್ಪಿಸಿಕೊಳ್ಳೋಕೆ VRS ತಗೊಳ್ತಾರ DGP?
Author: statenews2025
Posted By: statenews2025
Updated: Jan 19, 2026 | 11:00 AM

ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಅವರ ಕಚೇರಿಯಲ್ಲಿ ನಡೆದಿದೆ ಎನ್ನಲಾದ ‘ರಾಸಲೀಲೆ’ ವಿಡಿಯೋ ವೈರಲ್ ಆದ ಬೆನ್ನಲ್ಲೇ, ರಾವ್ ಅವರು ಸ್ವಯಂ ನಿವೃತ್ತಿ (Voluntary Retirement Scheme) ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಉನ್ನತ ಹುದ್ದೆಯಲ್ಲಿದ್ದುಕೊಂಡು ಸಮವಸ್ತ್ರದಲ್ಲೇ ಇಂತಹ ಕೃತ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿರುವುದು ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ತಂದಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. 

ಈ ವರ್ಷದ ಮೇ ತಿಂಗಳಲ್ಲಿ ರಾವ್ ನಿವೃತ್ತರಾಗಬೇಕಿತ್ತು. ಕೇವಲ 4 ತಿಂಗಳು ಬಾಕಿ ಇರುವಾಗ ಇಂಥದ್ದೊಂದು ಪ್ರಕರಣದಲ್ಲಿ ಸಿಲುಕಿರುವುದರಿಂದ, ಮುಜುಗರದಿಂದ ವಿಆರ್‌ಎಸ್‌ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅವರನ್ನು ಅಮಾನತು (Suspension) ಮಾಡುವ ಸಾಧ್ಯತೆಯೂ ಹೆಚ್ಚಿದ್ದು, ಈ ಬಗ್ಗೆ ಗೃಹ ಇಲಾಖೆಯಿಂದ ಅಧಿಕೃತ ಆದೇಶ ಇಂದು ಸಂಜೆಯೊಳಗೆ ಹೊರಬೀಳುವ ಸಾಧ್ಯತೆ ಇದೆ.