S Shorts

GBA Election: ಬೆಂಗಳೂರಿನ ಐದು ಪಾಲಿಕೆಗಳಲ್ಲಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ?

GBA Election: ಬೆಂಗಳೂರಿನ ಐದು ಪಾಲಿಕೆಗಳಲ್ಲಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ?
Author: Meghana Gowda
Posted By: Meghana Gowda
Updated: Jan 19, 2026 | 8:50 AM

ಬೆಂಗಳೂರು: ನಗರದ ಆಡಳಿತ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿರುವ ‘ಗ್ರೇಟರ್ ಬೆಂಗಳೂರು’ (Greater Bengaluru) ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಗರದ ಐದು ಪಾಲಿಕೆಗಳಾದ ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ಮತದಾರರ ವಿವರ ಈ ಕೆಳಕಂಡಂತೆ ಇದೆ.

ನಗರ ಪಾಲಿಕೆ (City Corporation) ವಾರ್ಡ್‌ಗಳ ಸಂಖ್ಯೆ ಮತಗಟ್ಟೆಗಳು ಒಟ್ಟು ಮತದಾರರು
ಬೆಂಗಳೂರು ಪಶ್ಚಿಮ (West) 112 2,493 27,25,714
ಬೆಂಗಳೂರು ಉತ್ತರ (North) 72 1,716 19,54,206
ಬೆಂಗಳೂರು ದಕ್ಷಿಣ (South) 72 1,716 17,44,270
ಬೆಂಗಳೂರು ಕೇಂದ್ರ (Central) 63 1,305 14,25,483
ಬೆಂಗಳೂರು ಪೂರ್ವ (East) 50 916 10,41,738
ಒಟ್ಟು (GBA Total) 369 8,045 88,91,411

ಈ ಬಾರಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ. 112 ವಾರ್ಡ್‌ಗಳನ್ನು ಹೊಂದಿರುವ ಬೆಂಗಳೂರು ಪಶ್ಚಿಮ ಪಾಲಿಕೆಯು ಅತಿ ಹೆಚ್ಚು ಅಂದರೆ 27 ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿದೆ.

ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ತಿದ್ದುಪಡಿಗಳಿದ್ದರೆ ಸಾರ್ವಜನಿಕರು ಫೆಬ್ರವರಿ 3ರವರೆಗೆ ಆಕ್ಷೇಪಣೆ ಸಲ್ಲಿಸಬಹುದು. ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಮಾರ್ಚ್ 16, 2026ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಈಗಾಗಲೇ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಜೂನ್ 30, 2026ರೊಳಗೆ ಇಡೀ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಗಡುವು ನೀಡಿದೆ. ಮಕ್ಕಳ ಶಾಲಾ ಪರೀಕ್ಷೆಗಳು ಮುಗಿದ ನಂತರ, ಅಂದರೆ ಮೇ 25ರ ಸುಮಾರಿಗೆ ಚುನಾವಣಾ ಪ್ರಕ್ರಿಯೆಗಳು ಅಧಿಕೃತವಾಗಿ ಚುರುಕುಗೊಳ್ಳಲಿವೆ.