ಶಿವಮೊಗ್ಗ: ಕರ್ತವ್ಯನಿರತ ಕೆಎಸ್‌ಆರ್‌ಟಿಸಿ (KSRTC )ನೌಕರ ಹೃದಯಾಘಾತ(Heart Attack)ದಿಂದ ಮೃತಪಟ್ಟ ಘಟನೆ ಸಾಗರದಲ್ಲಿ ನಡೆದಿದೆ.
ಸಾಗರದ ಕೆಎಸ್‌ಆರ್‌ಟಿಸಿ (KSRTC s)ಡಿಪೋದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ್ (41) (Sandeep)ಅವರಿಗೆ ಕರ್ತವ್ಯನಿರ್ವಹಣೆಯ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಸಹೋದ್ಯೋಗಿಗಳು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಆಸ್ಪತ್ರೆಗೆ ಕರೆದೊಯ್ದರೂ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಸಂದೀಪ್ ಅವರು ಸಾಗರದ ಮಾರಿಕಾಂಬ ದೇವಸ್ಥಾನದ ಹಿಂಭಾಗ ರಸ್ತೆಯ ನಿವಾಸಿಯಾಗಿದ್ದು,ಕರ್ತವ್ಯನಿಷ್ಠ, ಶಾಂತ ಸ್ವಭಾವದ ನೌಕರರೆಂದು ಹೆಸರು ಮಾಡಿದ್ದರು.
