S Shorts

Burude Case ಹೈಕೋರ್ಟ್‌ಗೆ ಹಾಜರಾದ ಮಹೇಶ್ ತಿಮರೋಡಿ!

Burude Case ಹೈಕೋರ್ಟ್‌ಗೆ ಹಾಜರಾದ ಮಹೇಶ್ ತಿಮರೋಡಿ!
Author: Sagaradventure
Posted By: Sagaradventure
Updated: Nov 6, 2025 | 11:12 AM

ಬೆಂಗಳೂರು: ಸೌಜನ್ಯಾ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಂಗಳೂರಿನ ಹೈಕೋರ್ಟ್‌ಗೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ. ಕಳೆದ ಸುಮಾರು ಎರಡು ತಿಂಗಳಿಂದ ನಾಪತ್ತೆಯಾಗಿದ್ದ ತಿಮರೋಡಿ, ಇದೀಗ ಏಕಾಏಕಿ ನ್ಯಾಯಾಲಯಕ್ಕೆ ಹಾಜರಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ.

ತಿಮರೋಡಿ ಅವರು ಹಳೆಯ ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ, ಅವರು ತಮ್ಮ ಮೇಲಿದ್ದ ಬುರುಡೆ ಪ್ರಕರಣವನ್ನು ಹಿಂಪಡೆಯಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ನ್ಯಾಯಾಲಯದ ಕಲಾಪ ಮುಗಿಸಿ ಹೊರಬರುತ್ತಿದ್ದಾಗ ಮಹೇಶ್ ತಿಮರೋಡಿ ಅವರನ್ನು ನೋಡಿದ ಮಾಧ್ಯಮ ಪ್ರತಿನಿಧಿಗಳು ಕ್ಯಾಮೆರಾ ಹಿಡಿದು ಪ್ರಶ್ನೆಗಳನ್ನು ಕೇಳಲು ಮುಂದಾದರು. ಇದನ್ನು ಕಂಡ ತಿಮರೋಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮದವರ ಬಳಿ ಬಂದ ತಿಮರೋಡಿ ಅವರು, “ಮಾಧ್ಯಮದವರು ಏನೂ ಕೇಳಬೇಡಿ,” ಎಂದು ಆಕ್ರೋಶಗೊಂಡು, ಯಾವುದೇ ಪ್ರತಿಕ್ರಿಯೆ ನೀಡದೆ ತಕ್ಷಣವೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.