S Shorts

Modi Insulted | ಪ್ರಧಾನಿ ಮೋದಿ ವಿರುದ್ಧ ‘ದೇಶದ್ರೋಹಿ’ ಪದ ಬಳಕೆ: ಎಂ.ಎಲ್.ಸಿ ನಸೀರ್ ಅಹ್ಮದ್ ಉಚ್ಛಾಟನೆಗೆ ಬಿಜೆಪಿ ಪಟ್ಟು

Modi Insulted | ಪ್ರಧಾನಿ ಮೋದಿ ವಿರುದ್ಧ ‘ದೇಶದ್ರೋಹಿ’ ಪದ ಬಳಕೆ: ಎಂ.ಎಲ್.ಸಿ ನಸೀರ್ ಅಹ್ಮದ್ ಉಚ್ಛಾಟನೆಗೆ ಬಿಜೆಪಿ ಪಟ್ಟು
Author: Meghana Gowda
Posted By: Meghana Gowda
Updated: Feb 3, 2026 | 11:02 AM

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಕಲಾಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ (Naseer Ahmed) ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ(BJP) ಸದಸ್ಯರು ಸಭಾಪತಿಗಳಿಗೆ ದೂರು ನೀಡಿದ್ದಾರೆ.

ಘಟನೆಯ ಹಿನ್ನೆಲೆ:

ವಿಧಾನ ಪರಿಷತ್ತಿನ ಕಲಾಪ ನಡೆಯುತ್ತಿದ್ದ ವೇಳೆ ನಸೀರ್ ಅಹ್ಮದ್ ಅವರು ಪ್ರಧಾನಮಂತ್ರಿಗಳ ವಿರುದ್ಧ ಅತ್ಯಂತ ಕೆಳಮಟ್ಟದ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಧಾನಿಯವರನ್ನು “ದೇಶದ್ರೋಹಿ” ಮತ್ತು “ದೇಶಕ್ಕೆ ದ್ರೋಹ ಮಾಡಿದವರು” ಎಂದು ಸಂಬೋಧಿಸಿರುವುದು ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಹೀಗಾಗಿ ಸದನದ ಘನತೆ ಮತ್ತು ಸಂಸದೀಯ ಮೌಲ್ಯಗಳನ್ನು ಗಾಳಿಗೆ ತೂರಿರುವ ನಸೀರ್ ಅಹ್ಮದ್ ಅವರನ್ನು ತಕ್ಷಣವೇ ಸದನದಿಂದ ಅಮಾನತ್ತುಗೊಳಿಸಬೇಕು ಎಂದು ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದ್ದಾರೆ.

ಪ್ರಧಾನಿ ಹುದ್ದೆಗೆ ಅವಮಾನ ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ಸದಸ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಭಾಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.  ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತು ಬಿಜೆಪಿ ಪಕ್ಷದ ವಿಧಾನ ಪರಿಷತ್ತಿನ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ತಮ್ಮ ಪ್ರತಿರೋಧ ದಾಖಲಿಸಿದರು.