S Shorts

ಪೊಲೀಸರಿಂದ Torture ಆರೋಪ: ಯುವಕ ಆತ್ಮಹತ್ಯೆ ಯತ್ನ!

ಪೊಲೀಸರಿಂದ Torture ಆರೋಪ: ಯುವಕ ಆತ್ಮಹತ್ಯೆ ಯತ್ನ!
Author: Sagaradventure
Posted By: Sagaradventure
Updated: Nov 2, 2025 | 7:03 AM

ದಾವಣಗೆರೆ: ಪೊಲೀಸರ ಕಿರುಕುಳಕ್ಕೆ ಬೇಸತ್ತ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಕಿರಣ್(24) ಎಂದು ಗುರುತಿಸಲಾಗಿದೆ.

ಕಿರಣ್‌ನನ್ನು ಕಳ್ಳತನ ಪ್ರಕರಣದ ಆರೋಪದಡಿ ಸಂತೇಬೆನ್ನೂರು ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರು ಕಿರಣ್ ಮೇಲೆ “ಕಳ್ಳತನ ನೀನೇ ಮಾಡಿದ್ದೀಯೆಂದು ಒಪ್ಪಿಕೋ” ಎಂದು ಒತ್ತಾಯಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಪೊಲೀಸರು ಕಿರಣ್ ನನ್ನು ಮೂರು ದಿನ ಠಾಣೆಯಲ್ಲಿ ಇಟ್ಟುಕೊಂಡು ಚಿತ್ರಹಿಂಸೆ ನೀಡಿದ್ದಾರೆ. ಪೊಲೀಸರ ಕಿರುಕುಳದಿಂದ ತತ್ತರಿಸಿದ ಕಿರಣ್, ಮತ್ತೆ ಠಾಣೆಗೆ ಹೋಗಬೇಕೆಂಬ ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸದ್ಯ ಕಿರಣ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ನಂತರ ಕುಟುಂಬಸ್ಥರು ಹಾಗೂ ಸ್ಥಳೀಯರು ಸಂತೇಬೆನ್ನೂರು ಠಾಣೆ ಎದುರು ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ.