ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ, ಇದೀಗ ಮತ್ತೊಮ್ಮೆ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಅವರನ್ನು 2024 ಜೂನ್ 11ರಂದು ಮೊದಲ ಬಾರಿಗೆ ಮೈಸೂರಿನಲ್ಲಿ ಬಂಧಿಸಲಾಗಿತ್ತು. 2024ರ ಆಕ್ಟೋಬರ್ ತಿಂಗಳಲ್ಲಿ ಅವರು ವೈದ್ಯಕೀಯ ಕಾರಣ ನೀಡಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ಅವರಿಗೆ ಡಿಸೆಂಬರ್ 2024ರಲ್ಲಿ ಜಾಮೀನು ಸಿಕ್ಕಿತ್ತು. ಇದನ್ನು ರಾಜ್ಯ ಸರ್ಕಾರ ಡಿಸೆಂಬರ್‌ನಲ್ಲೇ ಪ್ರಶ್ನೆ ಮಾಡಿದ್ದರಿಂದ 2025ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿತ್ತು, ಹೀಗಾಗಿ ಅವರು ಮತ್ತೆ ಜೈಲು ಸೇರಿದ್ದರು.
ಜಾಮೀನು ಪಡೆದು ಹೊರಗಿದ್ದ ನಟ ದರ್ಶನನ್ನು ಸುಪ್ರೀಂ ಆದೇಶದಂತೆ ಪೊಲೀಸರು 14 ಆಗಸ್ಟ್ 2025ರಂದು ಬಂಧನ ಮಾಡಿ ಪರಪ್ಪನ ಅಗ್ರಹಾರಕ್ಕೆ ಬಿಟ್ಟಿದ್ದರು. ಈಗ ಮತ್ತೆ ಸುಪ್ರೀಂಕೋರ್ಟ್‌ಗೆ ಜಾಮೀನು ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಸೇರಿ ಸುಮಾರು ಎಂಟೂವರೆ ತಿಂಗಳಾಗಿದ್ದು,ಇದೀಗ ಜಾಮೀನಿಗಾಗಿ ವಕೀಲ ರಂಜಿತ್ ರೋಹಟಗಿ ಮೂಲಕ ಸುಪ್ರೀಂಕೋರ್ಟ್‌ಗೆ ದರ್ಶನ್ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮೇ 4ರಂದು ದರ್ಶನ್ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆಗೆ ಬರಲಿದೆ.
