ಅ/A
News Image
State:

Dharwad ಪ್ರತಿಭಟನೆಗೆ ಮಣಿದ ಸರ್ಕಾರ?: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ‘Good News’, ವಯೋಮಿತಿ 5 ವರ್ಷ ಸಡಿಲಿಕೆ!

ಬೆಂಗಳೂರು: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟಿದೆ. ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ನೇಮಕಾತಿ ವಿಳಂಬದಿಂದಾಗಿ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ, ಮುಂಬರುವ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸುವುದಾಗಿ (Age Relaxation) ಮಹತ್ವದ ಘೋಷಣೆ ಮಾಡಿದ್ದಾರೆ.

ಅ/A
News Image
Health:

Water Crisis | ರಾಜ್ಯದ ಜನರೇ ನೀರಿನಲ್ಲಿ ಅಡಗಿದೆ ಅಪಾಯಕಾರಿ ಬ್ಯಾಕ್ಟೀರಿಯಾ!

ಬೆಂಗಳೂರು: ರಾಜ್ಯದಲ್ಲಿ ತರಕಾರಿಗಳಲ್ಲಿ ವಿಷಕಾರಿ ಸೀಸ ಪತ್ತೆಯಾದ ಬೆನ್ನಲ್ಲೇ, ಈಗ ಕುಡಿಯುವ ನೀರು ಕೂಡ ವ್ಯಾಪಕವಾಗಿ ಕಲುಷಿತಗೊಂಡಿರುವುದು ದೃಢಪಟ್ಟಿದೆ. ಜಲಜೀವನ್ ಮಿಷನ್ ಅಡಿ (Jal Jeevan Mission) ನಡೆಸಲಾದ ಪರೀಕ್ಷೆಯಲ್ಲಿ ಕುಡಿಯುವ ನೀರಿನಲ್ಲಿ ಅಪಾಯಕಾರಿ ರಾಸಾಯನಿಕ (Chemicals) ಮತ್ತು ಬ್ಯಾಕ್ಟೀರಿಯಾ (Bacteria) ಅಂಶಗಳು ಪತ್ತೆಯಾಗಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ದೊಡ್ಡ ಮಟ್ಟದ ಕುತ್ತು ಬಂದೊದಗಿದೆ.

ಅ/A
News Image
Dharwad:

Dharwadದಲ್ಲಿ ಸರ್ಕಾರಿ ಹುದ್ದೆಗಳಿಗಾಗಿ ‘ರಣಕಹಳೆ’: 2.7 ಲಕ್ಷ ಪೋಸ್ಟ್ ಖಾಲಿ, ರಸ್ತೆಗಿಳಿದು ಆಕ್ರೋಶ ಹೊರಹಾಕಿದ ಯುವಪಡೆ!

ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಮಂಗಳವಾರ ಸರ್ಕಾರಿ ಉದ್ಯೋಗದ ಕಿಚ್ಚು ಜೋರಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 2.7 ಲಕ್ಷ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ (AKSA) ಮತ್ತು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ಅ/A
News Image
Film:

Kantara ‘ದೈವ’ದ ಅನುಕರಣೆ ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ರಣವೀರ್ ಸಿಂಗ್; ತುರ್ತು ವಿಚಾರಣೆಗೆ ನಕಾರ!

ಬೆಂಗಳೂರು: ‘ಕಾಂತಾರ’ ಚಿತ್ರದ ದೈವವನ್ನು ಅನುಕರಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh), ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆಹೋಗಿದ್ದಾರೆ. ಆದರೆ, ಈ ಅರ್ಜಿಯ ತುರ್ತು ವಿಚಾರಣೆ ನಡೆಸಲು ನ್ಯಾಯಾಲಯ ಸಾರಾಸಗಟಾಗಿ ನಿರಾಕರಿಸಿದೆ.

ಅ/A
News Image
Uttara Kannada:

Sirsi ಮಾರಿಕಾಂಬಾ ಜಾತ್ರೆ: ‘ಆನ್‌ಲೈನ್ ಉಡಿ ಸೇವೆ’ ಹೆಸರಲ್ಲಿ ₹3,517 ವಂಚನೆ ಜಾಲ; ನಕಲಿ AI ವಿಡಿಯೋ ನಂಬಬೇಡಿ, ಕೇಸ್ ದಾಖಲು!

ಶಿರಸಿ(ಉತ್ತರಕನ್ನಡ): ಐತಿಹಾಸಿಕ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯ ಹೆಸರಿನಲ್ಲಿ ಆನ್‌ಲೈನ್ ಮೂಲಕ ಭಕ್ತರಿಗೆ ವಂಚಿಸಲು ಯತ್ನಿಸಿದ ನಕಲಿ ಜಾಲವೊಂದರ ವಿರುದ್ಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಯಜಮಾನ್’ (Yajmaan) ಎಂಬ ಐಡಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಐ (AI) ನಿರ್ಮಿತ ಜಾಹೀರಾತನ್ನು ನಂಬಿ ಹಣ ಕಳೆದುಕೊಳ್ಳದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಭಕ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅ/A
News Image
Politics:

Cabinet Reshuffle | ರಾಜ್ಯ ರಾಜಕೀಯದಲ್ಲಿ ಶೀಘ್ರವೇ ದೊಡ್ಡ ಬದಲಾವಣೆ? ಸಂಪುಟ ಪುನಾರಚನೆ ಬಗ್ಗೆ ಪರಮೇಶ್ವರ್ ನೀಡಿದ್ರು ಬಿಗ್ ಹಿಂಟ್!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆ ಹಾಗೂ ದಲಿತ ಸಿಎಂ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್ (G Parameshwara)  ಹೊಸ ಶಾಸಕರ ಬೇಡಿಕೆ ಹಾಗೂ ಕುಮಾರಸ್ವಾಮಿ ಅವರ ಭೇಟಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಅ/A
News Image
Sports:

Ranaji Final: ಊಟದ ವಿರಾಮದ ವೇಳೆಗೆ ಜಮ್ಮು ಕಾಶ್ಮೀರ 104/1; ಪ್ರಸಿದ್ಧ್ ಕೃಷ್ಣಗೆ ಆರಂಭಿಕ ವಿಕೆಟ್!

ಹುಬ್ಬಳ್ಳಿ: ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರ ಆರಂಭವಾದ 2025-26ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ದಿನದ ಭೋಜನ ವಿರಾಮದ (Lunch Break) ವೇಳೆಗೆ 34 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ.

ಅ/A
News Image
Politics:

Kharge | ಯೂತ್ ಕಾಂಗ್ರೆಸ್ ಕಾರ್ಯಕರ್ತರ ಬಂಧನಕ್ಕೆ ಖರ್ಗೆ ಆಕ್ರೋಶ: ನರೇಂದ್ರ ಮೋದಿ ಈಗ ‘ಸೆರೆಂಡರ್ ಮೋದಿ’

ಬೆಂಗಳೂರು: ಯೂತ್ ಕಾಂಗ್ರೆಸ್ ಕಾರ್ಯಕರ್ತರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun Kharge) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಸಹಜ ಹಕ್ಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಅ/A
News Image
Film:

Muddu Sose: ಮನೆಯೊಳಗಿನ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ವಿದ್ಯಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿರುವ, ಅತಿ ಹೆಚ್ಚು ವೀಕ್ಷಕರ ಮನಗೆದ್ದಿರುವ ‘ಮುದ್ದುಸೊಸೆ’ ಧಾರಾವಾಹಿ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಆರಂಭದಿಂದಲೂ ತನ್ನ ವೇಗವಾದ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಮನೆಮಾತಾಗಿರುವ ಈ ಸೀರಿಯಲ್‌ನಲ್ಲಿ, ಇದೀಗ ಕಥಾನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಯೊಂದು ಸಂಭವಿಸಿದೆ.

ಅ/A
News Image
Politics:

Ramzan-Holi ಹಬ್ಬಕ್ಕೆ ಖಡಕ್ ಎಚ್ಚರಿಕೆ; ಶಾಂತಿ ಕದಡಿದರೆ ಕಠಿಣ ಕ್ರಮ: ಗೃಹ ಸಚಿವರ ಸೂಚನೆ

ಬೆಂಗಳೂರು: ರಂಜಾನ್ ಮತ್ತು ಹೋಳಿ ಹಬ್ಬಗಳ ಆಚರಣೆಯ ವೇಳೆ ಯಾರಾದರೂ ಕಾನೂನು ಕೈಗೆತ್ತಿಕೊಂಡು ಶಾಂತಿ ಕದಡಲು ಯತ್ನಿಸಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅ/A
News Image
Uttara Kannada:

Gold Coin Scam | ​ಗುಪ್ತ ನಿಧಿಯ ಆಸೆಗೆ ಬಿದ್ದು 10 ಲಕ್ಷ ರೂ. ಕಳೆದುಕೊಂಡ ವ್ಯಾಪಾರಿ: ನಕಲಿ ಚಿನ್ನದ ನಾಣ್ಯ ನೀಡಿ ವಂಚನೆ!

​ಸಿದ್ದಾಪುರ(ಉತ್ತರ ಕನ್ನಡ): ಜಮೀನಿನಲ್ಲಿ ಗುಂಡಿ ತೋಡುವಾಗ 2 ಕೆ.ಜಿ. ಬಂಗಾರದ ನಾಣ್ಯಗಳು ಸಿಕ್ಕಿವೆ, ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ನಂಬಿಸಿದ ಖದೀಮರ ಜಾಲವೊಂದು, ಬೆಳಗಾವಿ ಮೂಲದ ವ್ಯಾಪಾರಿಯೊಬ್ಬರಿಗೆ ನಕಲಿ ನಾಣ್ಯಗಳನ್ನು ನೀಡಿ ಬರೋಬ್ಬರಿ 10 ಲಕ್ಷ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಸೋಮವಾರ (ಫೆ. 23) ನಡೆದಿದೆ.

ಅ/A
News Image
State:

Cyclone Alert | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ!

ಬೆಂಗಳೂರು: ದೇಶದ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಜಾಗತಿಕವಾಗಿ ಸದ್ದು ಮಾಡುತ್ತಿರುವ ‘ಹೊರಾಸಿಯೊ’ (Horacio) ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಅ/A
News Image
Politics:

Cabinet Reshuffle | ಕಾಂಗ್ರೆಸ್‌ನಲ್ಲಿ ಹೆಚ್ಚಿದ ಸಚಿವ ಸಂಪುಟ ಕಸರತ್ತು: 31 ಶಾಸಕರ ಸಹಿ ಇರುವ ಪತ್ರ ವೈರಲ್!

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನ (Congress) 31 ಶಾಸಕರು ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ ಬರೆದಿರುವ ಪತ್ರವೊಂದು ಈಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಈ ಪತ್ರದ ಮೂಲಕ ಸದ್ದು ಮಾಡುತ್ತಿದೆ.

ಅ/A
News Image
Health:

Health Guide | ಕ್ಯಾನ್ಸರ್ ನಿಯಂತ್ರಣ ಹೇಗೆ? ನಿಮ್ಮ ದೇಹದ ಈ 6 ಅಂಗಗಳ ಬಗ್ಗೆ ಇರಲಿ ಎಚ್ಚರ

ಇಂದಿನ ಬದಲಾದ ಜೀವನಶೈಲಿ ಮತ್ತು ಪರಿಸರ ಮಾಲಿನ್ಯದ ನಡುವೆ ಕ್ಯಾನ್ಸರ್ ಪ್ರಕರಣಗಳು ಸದ್ದಿಲ್ಲದೆ ಏರಿಕೆಯಾಗುತ್ತಿವೆ. ಮಕ್ಕಳಿಂದ ವೃದ್ಧರವರೆಗೆ ಯಾರನ್ನೂ ಬಿಡದ ಈ ಭಯಾನಕ ಕಾಯಿಲೆಯ ಬಗ್ಗೆ ಸರಿಯಾದ ಮಾಹಿತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಇಂದಿನ ಅಗತ್ಯವಾಗಿದೆ.

ಅ/A
News Image
National:

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗ್ತಾರ Tejaswi Surya?

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ (BJYM) ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಅವರಿಗೆ ಪಕ್ಷದ ಸಂಘಟನೆಯಲ್ಲಿ ದೊಡ್ಡ ಮಟ್ಟದ ಬಡ್ತಿ ಸಿಗುವ ಸಾಧ್ಯತೆಗಳಿವೆ. ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರ ಹೊಸ ತಂಡದಲ್ಲಿ ತೇಜಸ್ವಿ ಸೂರ್ಯ ಅವರು ‘ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ’ (National General Secretary) ಆಗಿ ನೇಮಕಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಅ/A
News Image
Uttara Kannada:

Shocking News | ಸನವಳ್ಳಿ ಜಲಾಶಯದಲ್ಲಿ ಈಜಲು ಹೋದ 17 ವರ್ಷದ ಬಾಲಕ ಜಲಸಮಾಧಿ; ಆತಂಕದಿಂದ ಬಾಯ್ಬಿಡದ ಸ್ನೇಹಿತರು!

ಮುಂಡಗೋಡ(ಉತ್ತರಕನ್ನಡ): ತಾಲೂಕಿನ ಸನವಳ್ಳಿ ಜಲಾಶಯದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ 17 ವರ್ಷದ ಯುವಕನೊಬ್ಬ ಆಕಸ್ಮಿಕವಾಗಿ ನೀರುಪಾಲಾಗಿರುವ ಘಟನೆ ವರದಿಯಾಗಿದೆ. ಅಜಯ್ ರಮೇಶ ಕೆರಿಹೊಲದವರ್ ಮೃ*ತಪಟ್ಟ ದುರ್ದೈವಿ. ಒಂದು ಸಣ್ಣ ನಿರ್ಲಕ್ಷ್ಯ ಹಾಗೂ ಭಯದಿಂದಾಗಿ ಇಡೀ ಕುಟುಂಬದ ಕನಸುಗಳು ಕ್ಷಣಾರ್ಧದಲ್ಲಿ ನುಚ್ಚುನೂರಾಗಿವೆ.

ಅ/A
News Image
Politics:

ಜಿಲ್ಲೆಯ ಏಕೈಕ BJP ಶಾಸಕನಿಗೆ ಕಾಂಗ್ರೆಸ್ ಗಾಳ; CM ಆಹ್ವಾನ ತಿರಸ್ಕರಿಸಿದ ಶಾಸಕ ದಿನಕರ ಶೆಟ್ಟಿ!

ಕುಮಟಾ(ಉತ್ತರಕನ್ನಡ): ಜಿಲ್ಲೆಯ ಏಕೈಕ ಬಿಜೆಪಿ ಶಾಸಕರಾಗಿರುವ ಕುಮಟಾ ಕ್ಷೇತ್ರದ ದಿನಕರ ಶೆಟ್ಟಿ ಅವರಿಗೆ ಕಾಂಗ್ರೆಸ್ ಸೇರುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ, ಆದರೆ ಶಾಸಕರು ಅದನ್ನು ನಯವಾಗಿ ತಿರಸ್ಕರಿಸಿದ ಘಟನೆ ನಡೆದಿದೆ.

ಅ/A
News Image
Film:

Yash Makeover | ಗಡ್ಡಕ್ಕೆ ಕತ್ತರಿ ಹಾಕಿದ ಯಶ್; ‘ಟಿಕೆಟ್’ ಪಾತ್ರದ ಮೇಕೋವರ್ ವಿಡಿಯೋ ಭಾರಿ ವೈರಲ್!

ಬೆಂಗಳೂರು: ‘ಕೆಜಿಎಫ್’ ಸರಣಿಯ ಯಶಸ್ಸಿನ ನಂತರ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash), ಇದೀಗ ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾಗಾಗಿ ಭರ್ಜರಿ ಮೇಕೋವರ್ ಮಾಡಿಕೊಂಡಿದ್ದಾರೆ. ಸುಮಾರು ಐದಾರು ವರ್ಷಗಳಿಂದ ಕಾಪಾಡಿಕೊಂಡಿದ್ದ ತಮ್ಮ ಐಕಾನಿಕ್ ಉದ್ದ ಗಡ್ಡ ಮತ್ತು ಮೀಸೆಯ ಲುಕ್‌ಗೆ ಬ್ರೇಕ್ ನೀಡಿರುವ ಯಶ್, ಈಗ ಕಂಪ್ಲೀಟ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
https://www.instagram.com/reel/DVFd5rxkqve/?utm_source=ig_web_copy_link&igsh=MzRlODBiNWFlZA==

ಅ/A
News Image
Mandya:

Triplets born: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮುಸ್ಲಿಂ ದಂಪತಿ.!

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು (Akkihebbalu) ಗ್ರಾಮದಲ್ಲಿ ಸಂಭ್ರಮವೋ ಸಂಭ್ರಮ. ಗ್ರಾಮದ ದಂಪತಿಗಳಿಗೆ ಒಂದೇ ಬಾರಿಗೆ ಮೂವರು ಪುಟ್ಟ ಅತಿಥಿಗಳ ಆಗಮನವಾಗಿದ್ದು, ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಅ/A
News Image
State:

Roopa vs Rohini | ಐಎಎಸ್ ಅಧಿಕಾರಿಗೆ ಬಿಗ್ ಶಾಕ್: ರೋಹಿಣಿ ಸಿಂಧೂರಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್ |

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (Roopa Moudgil)ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Rohini Sindhuri)ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ರೋಹಿಣಿ ಸಿಂಧೂರಿ ಅವರು ಈಗ ವಿಚಾರಣೆಯನ್ನು ಎದುರಿಸುವುದು ಅನಿವಾರ್ಯವಾಗಿದೆ.

ಅ/A
News Image
Health:

Toxic Vegetables | ದಿನನಿತ್ಯ ತಿನ್ನುವ ತರಕಾರಿಗಳಲ್ಲೇ ವಿಷ! ರಾಜ್ಯದ 19 ತರಕಾರಿ ಮಾದರಿಗಳಲ್ಲಿ ಮಿತಿಮೀರಿದ ಸೀಸದ ಅಂಶ!

ಬೆಂಗಳೂರು: ರಾಜ್ಯದ ಜನತೆ ನಿತ್ಯ ಬಳಸುವ ತರಕಾರಿಗಳಲ್ಲಿ (Vegetables) ಮಿತಿಮೀರಿದ ಪ್ರಮಾಣದ ಸೀಸ (Lead) ಮತ್ತು ವಿಷಕಾರಿ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಆತಂಕದ ನೆರಳು ಬಿದ್ದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನಡೆಸಿದ ಇತ್ತೀಚಿನ ಪರೀಕ್ಷೆಯಲ್ಲಿ ಈ ಆಘಾತಕಾರಿ ಸತ್ಯ ಬಯಲಾಗಿದೆ.

ಅ/A
News Image
Tumakuru:

Heartbreaking | ಹೆತ್ತಮ್ಮನಿಗೆ ಬೇಡವಾದ ಐದು ದಿನದ ಕಂದ; ಪ್ಲಾಸ್ಟಿಕ್ ಬ್ಯಾಗ್‌ನಲ್ಲಿತ್ತು ನವಜಾತ ಶಿಶು..!

ತುಮಕೂರು: ಹೆತ್ತ ತಾಯಿಯೇ ಮಗುವನ್ನು ಅನಾಥವಾಗಿ ಬಿಟ್ಟು ಹೋದ ಘಟನೆಯೊಂದು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ದೇವಸ್ಥಾನದ (Yediyur Temple)  ಸಮೀಪ ನಡೆದಿದೆ. ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ (Plastic Bag) ಅಳುತ್ತಿದ್ದ ನವಜಾತ ಶಿಶುವನ್ನು ಕಂಡು ಸ್ಥಳೀಯರು ಕಣ್ಣೀರು ಹಾಕಿದ್ದಾರೆ.

ಅ/A
News Image
State:

Karnataka Weather | ಮಾರ್ಚ್‌ಗೂ ಮೊದಲೇ ಕೆಂಡವಾದ ರಾಜ್ಯ; ಈ ವರ್ಷ 39 ಡಿಗ್ರಿ ದಾಟಲಿದೆ ಟೆಂಪರೇಚರ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಬಾರಿ ಫೆಬ್ರವರಿಯಲ್ಲೇ ಮೇ ತಿಂಗಳಿನಂತಹ ಬಿಸಿಲು ಕಾಣಿಸಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು(Temperatures Rising), ಮುಂದಿನ ಕೆಲವೇ ದಿನಗಳಲ್ಲಿ ನಗರದ ಉಷ್ಣಾಂಶ 38 ರಿಂದ 39 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಆತಂಕಕಾರಿ ಮುನ್ಸೂಚನೆ ನೀಡಿದೆ.

ಅ/A
News Image
Uttara Kannada:

Karwar: 450 ಹಾಸಿಗೆಗಳ ‘ಕ್ರಿಮ್ಸ್’ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ CM ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ

ಕಾರವಾರ: ಕರಾವಳಿ ಜಿಲ್ಲೆ ಉತ್ತರ ಕನ್ನಡದ ಜನರ ಬಹುದಿನಗಳ ಕನಸೊಂದು ಕೊನೆಗೂ ನನಸಾಗಿದೆ. ಕಾರವಾರದಲ್ಲಿ ತಲೆಎತ್ತಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್ – KRIMS) ನೂತನ 450 ಹಾಸಿಗೆಗಳ ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಜಂಟಿಯಾಗಿ ಲೋಕಾರ್ಪಣೆ ಮಾಡಿದರು.

ಅ/A
News Image
Politics:

​’ಲೋಕಾಯುಕ್ತ ತನಿಖೆಯಲ್ಲಿ ನಮ್ಮ ಹಸ್ತಕ್ಷೇಪವಿಲ್ಲ: DCM ಡಿ.ಕೆ. ಶಿವಕುಮಾರ್

ಕಾರವಾರ(ಉತ್ತರಕನ್ನಡ): ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು ಲೋಕಾರ್ಪಣೆ ಮಾಡಲು ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಜೆಪಿ ಶಾಸಕ ಚಂದ್ರು ಲಮಾಣಿ ಮೇಲಿನ ಲೋಕಾಯುಕ್ತ ದಾಳಿ ಕುರಿತು ಪರೋಕ್ಷವಾಗಿ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಅ/A
News Image
Uttara Kannada:

ಉತ್ತರ ಕನ್ನಡಕ್ಕೆ CM, DCM ಆಗಮನ: 34.21 ಕೋಟಿ ರೂ. ವೆಚ್ಚದ ಬಹುನಿರೀಕ್ಷಿತ ಗಂಗಾವಳಿ ಸೇತುವೆ ಲೋಕಾರ್ಪಣೆ

ಅಂಕೋಲಾ(ಉತ್ತರಕನ್ನಡ): ಕರಾವಳಿ ಭಾಗದ ಅಭಿವೃದ್ಧಿಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಬಹುನಿರೀಕ್ಷಿತ ಮಂಜಗುಣಿ-ಗಂಗಾವಳಿ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದಾರೆ.

ಅ/A
News Image
State:

ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ Mobile, Social Media ಬ್ಯಾನ್? CM ಸಿದ್ದರಾಮಯ್ಯ ಮಹತ್ವದ ಸುಳಿವು!

ಬೆಂಗಳೂರು: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಫೋನ್ ಹಾಗೂ ಸಾಮಾಜಿಕ ಜಾಲತಾಣಗಳ (Social Media) ಬಳಕೆಯನ್ನು ನಿರ್ಬಂಧಿಸುವ ಕುರಿತು ಕರ್ನಾಟಕ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಶನಿವಾರ ಬೆಂಗಳೂರಿನಲ್ಲಿ ನಡೆದ ವಿಶ್ವವಿದ್ಯಾಲಯಗಳ ಕುಲಪತಿಗಳ (Vice-Chancellors) ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ತಜ್ಞರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಅ/A
News Image
Film:

‘Second Case of Seetharam’ – ಮಲೆನಾಡಿನ ಸರಣಿ ಕೊಲೆಗಳ ಬೆನ್ನತ್ತಿದ ಪೊಲೀಸ್; ಟ್ವಿಸ್ಟ್‌ಗಳೇ ಚಿತ್ರದ ಹೈಲೈಟ್!

ಬೆಂಗಳೂರು: 2021ರಲ್ಲಿ ತೆರೆಕಂಡಿದ್ದ ‘ಸೀತಾರಾಮ್ ಬಿನೋಯ್’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಮತ್ತು ನಟ ವಿಜಯ್ ರಾಘವೇಂದ್ರ ಜೋಡಿ, ಇದೀಗ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case of Seetharam) ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಇದೊಂದು ಪಕ್ಕಾ ಮರ್ಡರ್ ಮಿಸ್ಟ್ರಿ ಕಥೆಯಾಗಿದ್ದು, ಹಿಂದಿನ ಚಿತ್ರಕ್ಕಿಂತಲೂ ಹೆಚ್ಚು ರೋಚಕವಾಗಿದೆ.

ಅ/A
News Image
Chikkamagaluru:

Chikkamagaluru: ಇಬ್ಬರನ್ನು ಬಲಿಪಡೆದಿದ್ದ ಒಂಟಿ ಸಲಗ ಕೊನೆಗೂ ಸೆರೆ; ಮಹಿಳೆ ಸಾ*ವನ್ನಪ್ಪಿದ ಕೇವಲ 30 ನಿಮಿಷದಲ್ಲೇ ರೋಚಕ ಕಾರ್ಯಾಚರಣೆ!

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಮಲೆನಾಡಿಗರನ್ನು ಬೆಚ್ಚಿಬೀಳಿಸಿ, ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ರಕ್ಕಸ ಕಾಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಭಾನುವಾರ (ಇಂದು) ಬೆಳಿಗ್ಗೆ ಮತ್ತೊಬ್ಬ ಕಾರ್ಮಿಕ ಮಹಿಳೆಯನ್ನು ಭೀಕರವಾಗಿ ಕೊಂ*ದ ಬೆನ್ನಲ್ಲೇ, ಅಧಿಕಾರಿಗಳು ಮತ್ತು ವೈದ್ಯರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆನೆಯನ್ನು ಮಣಿಸಿದ್ದಾರೆ.

ಅ/A
News Image
International:

ಸುಪ್ರೀಂ ಕೋರ್ಟ್ ತೀರ್ಪಿಗೆ Trump ಸೆಡ್ಡು: ‘ಅಮೆರಿಕಾ ವಿರೋಧಿ’ ಎಂದ ಅಧ್ಯಕ್ಷರಿಂದ ಜಾಗತಿಕ ಸುಂಕ ಶೇ.15ಕ್ಕೆ ದಿಢೀರ್ ಏರಿಕೆ!

ವಾಷಿಂಗ್ಟನ್ ಡಿಸಿ: ತಮ್ಮ ಆಡಳಿತ ವಿಧಿಸಿದ್ದ ಜಾಗತಿಕ ಆಮದು ಸುಂಕವನ್ನು (Global Tariffs) ಅಮೆರಿಕಾದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕೇವಲ ಒಂದು ದಿನದ ಬಳಿಕ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಈ ಸುಂಕವನ್ನು ಶೇ.10 ರಿಂದ ಶೇ.15ಕ್ಕೆ ದಿಢೀರ್ ಏರಿಕೆ ಮಾಡಿದ್ದಾರೆ.