S Shorts

ಡಿಕೆಶಿ CM ಆಗಲೆಂದು ಕೊಡಗಿನ ಕಾವೇರಿ ಮಾತೆಗೆ ವಿಶೇಷ ಪೂಜೆ

ಡಿಕೆಶಿ CM ಆಗಲೆಂದು ಕೊಡಗಿನ ಕಾವೇರಿ ಮಾತೆಗೆ ವಿಶೇಷ ಪೂಜೆ
Author: Meghana Gowda
Posted By: Meghana Gowda
Updated: Nov 29, 2025 | 11:22 AM

ಕೊಡಗು: ರಾಜ್ಯ ರಾಜಕೀಯದಲ್ಲಿ (State Politics) ಮುಖ್ಯಮಂತ್ರಿ (CM) ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ (CM Chair Fight) ತೀವ್ರವಾಗಿರುವ ಹಿನ್ನೆಲೆಯಲ್ಲಿ, ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿ ಕೊಡಗಿನಲ್ಲಿ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೊಡಗು ಮತ್ತು ಮೈಸೂರು ಗಡಿ ಭಾಗದಲ್ಲಿರುವ ಕಾವೇರಿ ಪ್ರತಿಮೆ (Cauvery Statue) ಬಳಿ  ಡಿ.ಕೆ. ಶಿವಕುಮಾರ್ ಅವರ ಅಭಿಮಾನಿಯಾದ ಮೈಸಿ ಕತ್ತಣೀರ (Mysi Kattanira) ಅವರ ನೇತೃತ್ವದಲ್ಲಿ ಈ ಪೂಜೆ ನೆರವೇರಿಸಲಾಯಿತು.

ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂಬ ಏಕೈಕ ಆಶಯದೊಂದಿಗೆ ಅಭಿಮಾನಿಗಳು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಡಿಕೆಶಿ ಅವರ ಭಾವಚಿತ್ರಗಳನ್ನು ಹಿಡಿದು ಅವರ ಪರ ಘೋಷಣೆಗಳನ್ನು ಕೂಗಿದರು. ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಒಗ್ಗಟ್ಟು ಪ್ರದರ್ಶಿಸುವ ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್ (Breakfast Politics) ಮುಗಿದ ಬೆನ್ನಲ್ಲೇ, ಕೊಡಗಿನಲ್ಲಿ ಅಭಿಮಾನಿಗಳು ಈ ರೀತಿ ಬಹಿರಂಗವಾಗಿ ಪೂಜೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.