ಸೂರತ್: ಪತ್ನಿಯ ಕೊಲೆ ಮಾಡಿ ಶವದ ಮೇಲೆ ಸಿಮೆಂಟ್ ಸುರಿದು ಮರದ ಪೆಟ್ಟಿಗೆಯಲ್ಲಿ ಬಚ್ಚಿಟ್ಟು, ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ವ್ಯಕ್ತಿಯನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ.
ಶಿಲ್ಪಾ ಸಾಲ್ವಿ (39) ಮೃತ ಮಹಿಳೆ. ಪತ್ನಿಯನ್ನು ಕೊಲೆ ಮಾಡಿರುವ ಆರೋಪಿ ವಿಶಾಲ್ ಸಾಲ್ವಿ (40), ಪತ್ನಿ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ತನಿಖೆ ಆರಂಭಿಸಿದಾಗ ಮನೆಯೊಳಗೆ ಸಿಕ್ಕ ಒಂದು ಸಣ್ಣ ಸುಳಿವು ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿದೆ.
ವಿಶಾಲ್ ಮತ್ತು ಶಿಲ್ಪಾ ಅವರ ಮಗನಿಗೆ ಮನೆಯಲ್ಲಿ ತನ್ನ ತಂದೆ ಬರೆದಿದ್ದ ಪತ್ರ ಸಿಕ್ಕಿತ್ತು. ಅದರಲ್ಲಿ ವಿಶಾಲ್, ನಾನು ದೊಡ್ಡ ತಪ್ಪು ಮಾಡಿದ್ದೇನೆ, ಶಿಲ್ಪಾ ಇನ್ನು ಬದುಕಿಲ್ಲ ಎಂದು ಬರೆದುಕೊಂಡಿದ್ದ. ಮಗ ಈ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದ ತಕ್ಷಣವೇ ಮನೆಯೊಳಗೆ ಸಿಕ್ಕ ಒಂದು ಸಣ್ಣ ಸುಳಿವು ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿತು.
ಮನೆಯ ಬೀಗ ಮುರಿದು ಒಳಹೋದಾಗ ಕೊಳೆಯುತ್ತಿರುವ ವಾಸನೆ ಬಂದಿದೆ. ಅಲ್ಲಿನ ಮೂಲೆಯಲ್ಲಿದ್ದ ಮರದ ಪೆಟ್ಟಿಗೆಯನ್ನು ತಪಾಸಣೆ ಮಾಡಿದಾಗ, ಶಿಲ್ಪಾ ಅವರ ಶವ ಪತ್ತೆಯಾಯಿತು. ಸಾಕ್ಷ್ಯ ನಾಶಪಡಿಸಲು ವಿಶಾಲ್ ಶವದ ಮೇಲೆ ಕಚ್ಚಾ ಸಿಮೆಂಟ್ ಸುರಿದು ಅದನ್ನು ಪೆಟ್ಟಿಗೆಯೊಳಗೆ ಭದ್ರಪಡಿಸಿದ್ದ.
ಆರೋಪಿ ವಿಶಾಲ್ ಸಾಲ್ವಿ (40), ನಾಲ್ಕು ದಿನಗಳ ಹಿಂದೆ ತನ್ನ ಪತ್ನಿ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ
