Home State Politics National More
STATE NEWS

ಬಿಗ್‌ಬಾಸ್‌ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ ರೂಪೇಶ್‌ ಶೆಟ್ಟಿ ಮನದಾಳದ ಮಾತು!

Rakshitha shetty 20250928184041
Posted By: Rashmi Yadav
Updated on: Oct 16, 2025 | 11:27 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಬಗ್ಗೆ ಮಾಜಿ ಸ್ಪರ್ಧಿ ಹಾಗೂ ಸೀಸನ್ 9ರ ವಿಜೇತ ರೂಪೇಶ್ ಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಕಾಣಿಸಿಕೊಂಡಿರುವ ತಮ್ಮೂರಿನ ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿಯ ಆಟ ಅವರನ್ನು ವಿಶೇಷವಾಗಿ ಮೆಚ್ಚಿಸಿದೆ.

ಪ್ರಾರಂಭಿಕ ದಿನದಲ್ಲೇ ರಕ್ಷಿತಾ ಶೆಟ್ಟಿಗೆ ಎಲಿಮಿನೇಷನ್ ಶಾಕ್ ಸಿಕ್ಕಿದ್ದನ್ನು ನೆನಪಿಸಿಕೊಂಡ ರೂಪೇಶ್, “ಮೊದಲ ದಿನವೇ ಹೊರಬಂದಾಗ ಖಂಡಿತ ಬೇಜಾರಾಯಿತು. ಪಾಪ ಒಂದು ಕನಸು ಕಟ್ಟಿಕೊಂಡು ಒಳಗೆ ಹೋದಾಗ ಮೊದಲೇ ಶಾಕ್ ಆದರೆ ಯಾರಿಗೂ ದುಃಖವಾಗುತ್ತದೆ. ಆದರೆ ಈಗ ನೋಡಿದರೆ ಅದು ಒಳ್ಳೆಯದಾಯಿತು ಅನಿಸುತ್ತಿದೆ. ಅಲ್ಲಿ ಇಂತಹ ಒಬ್ಬ ಕಂಟೆಸ್ಟೆಂಟ್ ಇದ್ದಾರೆ ಅನ್ನೋದೇ ಸ್ಟ್ರೆಸ್‌ಫುಲ್ ಸನ್ನಿವೇಶವನ್ನು ತರುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇರಲು ಅವರಿಗೆ ಅರ್ಹತೆ ಇದೆ ಅನ್ನಿಸುತ್ತದೆ” ಎಂದು ಹೇಳಿದರು.

ಹೀಗೇ ಮುಂದುವರಿದು ಅವರು, “ಅವರು ಆಟ ಆಡುತ್ತಿರುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ಅವರ ಫನ್ ಎಲಿಮೆಂಟ್ ಮಜಾ ಕೊಡ್ತಿದೆ. ರಕ್ಷಿತಾದಲ್ಲಿ ನಿಜವಾದ ಇನ್ನೋಸೆನ್ಸ್ ಇದೆ. ಅಲ್ಲಿ ಆ ಇನ್ನೋಸೆನ್ಸ್ ವರ್ಕ್ ಆಗುತ್ತಿದೆ. ನಾನು ಅವರ ಆಟವನ್ನು ಸಖತ್ ಎಂಜಾಯ್ ಮಾಡ್ತಿದ್ದೇನೆ” ಎಂದಿದ್ದಾರೆ.

Shorts Shorts