Home State Politics National More
STATE NEWS

ನ.24ರಿಂದ ಸಾಕುಪ್ರಾಣಿಗಳಿಗೆ ಹೊಸ ನಿಯಮ: ಉಲ್ಲಂಘಿಸಿದ್ರೆ ₹5,000 ದಂಡ!

Pet liecensing
Posted By: StateNews Desk
Updated on: Nov 1, 2025 | 12:29 PM

ಚೆನ್ನೈ: ಜವಾಬ್ದಾರಿಯುತ ಸಾಕುಪ್ರಾಣಿ ಪಾಲನೆಯನ್ನು ಉತ್ತೇಜಿಸಲು ಮತ್ತು ನಗರದ ನೈರ್ಮಲ್ಯವನ್ನು ಕಾಪಾಡಲು, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ನವೆಂಬರ್ 24 ರಿಂದ ಜಾರಿಗೆ ಬರುವಂತೆ ಹೊಸ ಕಠಿಣ ನಿಯಮಗಳನ್ನು ಘೋಷಿಸಿದೆ. ಈ ನಿಯಮಗಳು ದೇಶದಲ್ಲಿಯೇ ಪ್ರಾಣಿ ಪಾಲನೆಗೆ ಹೊಸ ಮಾನದಂಡವನ್ನು ಸ್ಥಾಪಿಸುವ ನಿರೀಕ್ಷೆಯಿದೆ.

ಇನ್ನುಮುಂದೆ ಚೆನ್ನೈನಲ್ಲಿ ಸಾಕುಪ್ರಾಣಿಗಳನ್ನು (ನಾಯಿಗಳು ಮತ್ತು ಬೆಕ್ಕುಗಳು) ಸಾಕಲು ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ ₹5,000ರವರೆಗೆ ದಂಡ ವಿಧಿಸುವುದಾಗಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಎಲ್ಲಾ ಸಾಕುಪ್ರಾಣಿಗಳು ಪರವಾನಗಿ ಪಡೆದಿರಬೇಕು, ಲಸಿಕೆ ಹಾಕಿಸಿರಬೇಕು ಮತ್ತು ಮೈಕ್ರೋಚಿಪ್ ಅಳವಡಿಸಿರಬೇಕು. ಪರವಾನಗಿ ಇಲ್ಲದಿದ್ದರೆ ₹5,000 ದಂಡ ವಿಧಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳಿಗೆ ಲೀಶ್ (ಬೆಲ್ಟ್) ಹಾಕುವುದು ಮತ್ತು ಕೆಲವು ತಳಿಗಳಿಗೆ ಮಜಲ್ (ಬಾಯಿ ಮುಚ್ಚಳ) ಹಾಕುವುದು ಕಡ್ಡಾಯವಾಗಿದ್ದು, ಪಬ್ಲಿಕ್‌ನಲ್ಲಿ ಲೀಶ್/ಮಜಲ್ ಇಲ್ಲದಿದ್ದರೆ ₹500 ದಂಡ ವಿಧಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಕುಪ್ರಾಣಿಗಳ ತ್ಯಾಜ್ಯವನ್ನು (ಮಲ) ಮಾಲೀಕರೇ ಸ್ವಚ್ಛಗೊಳಿಸಬೇಕು. ತ್ಯಾಜ್ಯ ಸ್ವಚ್ಛ ಮಾಡದಿದ್ದರೂ ₹500 ದಂಡ ವಿಧಿಸಲಾಗುತ್ತದೆ.

GCC ಈಗಾಗಲೇ ಈ ನಿಯಮಗಳಿಗೆ ಬೇಕಾದ ಪರವಾನಗಿ ನೋಂದಣಿಯನ್ನು ಆನ್‌ಲೈನ್‌ನಲ್ಲಿ ಪ್ರಾರಂಭಿಸಿದೆ. ಅಲ್ಲದೆ, ಪಾಲನೆಯನ್ನು ಉತ್ತೇಜಿಸಲು ಉಚಿತ ಮೈಕ್ರೋಚಿಪ್ಪಿಂಗ್ ಸೇವೆಗಳನ್ನು ಸಹ ಒದಗಿಸುತ್ತಿದೆ.

Shorts Shorts