ಬೆಂಗಳೂರು: ೭೦ ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ತಾಯಿ ಭುವನೇಶ್ವರಿ ಪ್ರತಿಮೆ ಬಳಿ ಸಿಎಂ ಸಿದ್ದರಾಮಯ್ಯ (Siddaramaiah )ಆಗಮಿಸುತ್ತಿದಂತೆ DCM ಡಿಕೆ ಶಿವಕುಮಾರ್ ಹಸ್ತಲಾಘವ ಮಾಡಿ ಶುಭಕೋರಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಡಿಕೆಶಿಗೆ ನಗುನುಗುತ ಕೈಕುಲುವ ಮೂಲಕ ಆತ್ಮೀಯತೆಯಿಂದ ಬರಮಾಡಿಕೊಂಡರು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪವರ್ ಶೇರಿಂಗ್ ಚರ್ಚೆಯ ಊಹಾಪೋಗಳ ನಡುವೆಯೂ ನಗು ಮುಖದಲ್ಲಿ ಕಾಣಿಸಿಕೊಂಡದ್ದು ಬಹಳ ಅಚ್ಚರಿಯಾಗಿ ಕಾಣಿಸಿತು.
ನಂತರ ೭೦ ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ತಾಯಿ ಭುವನೇಶ್ವರಿ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ ಎಲ್ಲರಿಗೂ ಶುಭಾಶಯ ಕೋರಿದರು.
ಈ ವೇಳೆ ಡಿಸಿಎಂ ಡಿಕೆಶಿವಕುಮಾರ್,ಸಭಾಪತಿ ಬಸವರಾಜ ಹೊರಟ್ಟಿ,ಸಿಎಸ್ ಶಾಲಿನಿ ರಜನೀಶ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.






