ಬೆಂಗಳೂರು: ಕಗ್ಗಲೀಪುರದ ಅಯಾನ್ ಹೋಂ ಸ್ಟೇ ಮೇಲೆ ಪೊಲೀಸರಿಂದ ದಾಳಿ. ಬೆಂಗಳೂರಿನ 150 ಕ್ಕೂ ಹೆಚ್ಚು ಜನರಿಂದ ರೇವ್ ಪಾರ್ಟಿ(Rave party) ಆಯೋಜನೆ.
ರಾಮನಗರ ಜಿಲ್ಲೆಯ ತಗಚಗೆರೆ ಬಳಿಯಿರುವ ಅಯಾನ್ ಹೋಂ ಸ್ಟೇ ಯಲ್ಲಿ, 150 ಕ್ಕೂ ಹೆಚ್ಚು ಯುವಕ ಯುವತಿಯರು ರೇವ್ ಪಾರ್ಟಿಯನ್ನು ನಡೆಸುತ್ತಿದ್ದು ಮತ್ತು ಮಾದಕ ವಸ್ತುಗಳನ್ನು ಬಳಸುತ್ತಿದ್ದಾರೆ ಎಂದು ಮಾಹಿತಿ ಬಂದ ಕೂಡಲೇ ತಡ ರಾತ್ರಿ 3 ಗಂಟೆಯ ಸಮಯದಲ್ಲಿ ಹೋಂ ಸ್ಟೇ ಮೇಲೆ ಪೋಲಿಸರು ದಾಳಿಮಾಡಿದ್ದಾರೆ.
ಬಂಧಿತರಾದ ಯುವಕ ಯುವತಿಯರನ್ನು ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಗೆ ಕಳುಹಿಸಲಾಗಿದ್ದು, ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






