ತಮಿಳುನಾಡು: ಚಲಿಸುತ್ತಿದ್ದ ರೈಲಿಗೆ ಹತ್ತುವ ವೇಳೆ ರೈಲಿನ ಕೆಳಗೆ ಜಾರಿ ಬೀಳುತ್ತಿದ್ದ ಮಹಿಳೆಯನ್ನು ರೈಲ್ವೇ ರಕ್ಷಣಾ ಪಡೆ(RPF) ಸಿಬ್ಬಂದಿ ಸಮಯ ಪ್ರಜ್ಞೆಯಿಂದ ರಕ್ಷಣೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಎರೋಡ್ ಜಂಕ್ಷನ್‌ನಲ್ಲಿ ಮಹಿಳೆಯೊಬ್ಬರು ರೈಲು ಹತ್ತಲು ಆಗಮಿಸಿದ್ದು, ಆದರೆ ಅದಾಗಲೇ ರೈಲು ಚಲಿಸಲು ಆರಂಭಿಸಿದೆ. ಹೀಗಾಗಿ ಮಹಿಳೆ ಓಡಿಹೋಗಿ ರೈಲು ಏರಲು ಮುಂದಾಗಿದ್ದು, ಈ ವೇಳೆ ಕಾಲು ಜಾರಿ ನಿಯಂತ್ರಣ ತಪ್ಪಿದ ಮಹಿಳೆ ಇನ್ನೇನು ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಸಿಲುಕುವ ಹಂತದಲ್ಲಿದ್ದರು.
ಈ ವೇಳೆ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿಯೊಬ್ಬರು ಓಡಿಹೋಗಿ ಬೀಳುತ್ತಿದ್ದ ಮಹಿಳೆಯನ್ನು ಪ್ಲಾಟ್‌ಫಾರಂನತ್ತ ಎಳೆದುಕೊಂಡು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಈ ಘಟನೆ ಬೆನ್ನಲ್ಲೇ ಭಾರತೀಯ ರೈಲ್ವೆ ಎಲ್ಲ ಪ್ರಯಾಣಿಕರಿಗೂ ಎಚ್ಚರಿಕೆ ನೀಡಿದೆ. ರೈಲು ಸಂಪೂರ್ಣವಾಗಿ ನಿಂತ ನಂತರವೇ ಹತ್ತಲು ಅಥವಾ ಇಳಿಯಲು ವಿನಂತಿಸಿದೆ. ಸುರಕ್ಷತೆಗಾಗಿ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ.
https://x.com/RailMinIndia/status/1984534625428099396






