ಬೆಳಗಾವಿ: ರಾಜ್ಯೋತ್ಸವ ಸಂಭ್ರಮದ ಮಧ್ಯೆ ಕಳ್ಳರ ಅಟ್ಟಹಾಸ ಬೆಳಗಾವಿಯಲ್ಲಿ ಬಾರಿ ಸದ್ದು ಮಾಡಿದೆ. ಕೇವಲ ಒಂದು ಗಂಟೆಯೊಳಗೆ ಬರೋಬ್ಬರಿ 300ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಕಳ್ಳತನವಾಗಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಹೌದು ನಿನ್ನೆ ರಾತ್ರಿ 7 ರಿಂದ 8 ಗಂಟೆಯೊಳಗೆ ಮೆರವಣಿಗೆಯ ವೇಳೆ ಈ ಕಳ್ಳತನಗಳು ನಡೆದಿದ್ದು, ಸಂಭ್ರಮದಲ್ಲಿ ತೊಡಗಿದ್ದ ನಾಗರಿಕರು ತಾವು ಮೊಬೈಲ್ ಕಳೆದುಕೊಂಡಿರುವುದನ್ನು ನಂತರ ಅರಿತು ಬೆಚ್ಚಿಬಿದ್ದಿದ್ದಾರೆ.
300ಕ್ಕೂ ಹೆಚ್ಚು ಜನರು ತಮ್ಮ ಮೊಬೈಲ್ ಕಳೆದುಕೊಂಡ ಬಗ್ಗೆ ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆಗೆ ತೆಗೆದುಕೊಂಡಿದ್ದು, ಸಂಘಟಿತ ಕಳ್ಳರ ಗ್ಯಾಂಗ್ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ರಾಜ್ಯೋತ್ಸವದ ಭಾರೀ ಜನಸಮೂಹವನ್ನು ಸದುಪಯೋಗಪಡಿಸಿಕೊಂಡ ಕಳ್ಳರು, ಕ್ಷಣಾರ್ಧದಲ್ಲಿ ಜನರಿಂದ ಮೊಬೈಲ್‌ಗಳನ್ನು ಕದಿಯುವ ಮೂಲಕ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.






