ಬೆಂಗಳೂರು: ನಗರದ ಲಾಲ್‌ಬಾಗ್ ಮುಂಭಾಗದ ಟನಲ್ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ತೇಜಸ್ವಿ ಸೂರ್ಯ ಮಹತ್ವಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. “ಈ ರಸ್ತೆ ಶ್ರೀಮಂತರಿಗಾಗಿಯೇ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರ 12% ಜನರ ಬಳಿ ಕಾರು ಇರುವಾಗ, ಈ ರೀತಿಯ ದೊಡ್ಡ ಯೋಜನೆ ಸಾಮಾನ್ಯ ನಾಗರಿಕರ ಬೇಸರವನ್ನು ಮಾತ್ರ ಹೆಚ್ಚಿಸುತ್ತದೆ” ಎಂದು ತೇಜಸ್ವಿ ಸೂರ್ಯ ಹೇಳಿದರು.
ಇಂದು ಮಾಧ್ಯಮದವರ ಮುಂದೆ ಮಾತನಾಡಿದ ಅವರು, ಟನಲ್ ರಸ್ತೆಯ ಎಂಟ್ರಿ ಮತ್ತು ಎಕ್ಸಿಟ್ ಲಾಲ್‌ಬಾಗ್ ಬಳಿ ಇರಲಿದೆ. ಲಾಲ್‌ಬಾಗ್, ಸ್ಯಾಂಕಿ, ಮತ್ತು ಇತರ ಸ್ಥಳಗಳಲ್ಲಿ ಇನ್-ಲೆಟ್, ಔಟ್-ಲೆಟ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಸಂಗತಿ ಬಗ್ಗೆ ಆದರೆ ಯಾವ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ. ಬೆಂಗಳೂರಿನ ಆರ್ಥಿಕ ಪರಿಸ್ಥಿತಿ ಇಂತಹ ಯೋಜನೆಯಿಂದ ಪಾತಾಳಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಅಧಿಕಾರಿಗಳಿಂದ ಸಾರ್ವಜನಿಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ನಿತಿನ್ ಗಡ್ಕರಿ ಅವರು ಬೇರೆ ಯೋಜನೆ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಕೆಲವರು ತಪ್ಪಾಗಿ ಈ ಯೋಜನೆಗೆ ಸಂಬಂಧಿಸಿದೆ. ನಾನು ಗಡ್ಕರಿಗೆ ಮಾಹಿತಿ ನೀಡಿದಾಗ ಅವರು ಗಾಬರಿ ಆಗಿದ್ದರು. ಈಗ, ಅನುಮತಿ ಗಡ್ಕರಿಯವರಿಂದ ಬಂದಿದೆ ಅಂತ ಹೇಳಲಾಗುತ್ತಿದೆ. ಗಡ್ಕರಿ ವಿರುದ್ಧವಾದರೆ ಈ ಯೋಜನೆ ನಿಲ್ಲುಸುತ್ತಾರಾ ? ಎಂದು ಪ್ರಶ್ನಿಸಿದರು.






