ಬೆಂಗಳೂರು: ಬಿಜೆಪಿಯವರು RSS ಪರವಾಗಿ ಮಾತನಾಡದಿದ್ದರೆ ಯಾವ ನಾಯಕರಿಗೂ ಟಿಕೆಟ್ ಸಿಗುವುದಿಲ್ಲ. ಹೀಗಾಗಿ ಅವರ ತಾಳಕ್ಕೆ ತಕ್ಕಂತೆ ಬಿಜೆಪಿಯವರುಕುಣಿಯುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಟೀಕಿಸಿದರು.
ರಾಜ್ಯದಲ್ಲಿ ಪಥಸಂಚಲನ ವಿವಾದ ಮುಂದುವರಿದಿರುವ ಹಿನ್ನೆಲೆಯಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮದವರ ಮುಂದೆ ಮಾತನಾಡಿ ಬಿಜೆಪಿ ಮತ್ತು ಆರ್‌ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಪಥಸಂಚಲನ ಕುರಿತು ಕಳೆದ ಒಂದು ತಿಂಗಳಿನಿಂದ ಜಟಾಪಟಿ ನಡೆಯುತ್ತಿದೆ. ನಿನ್ನೆ RSS ಪ್ರಧಾನ ಕಾರ್ಯದರ್ಶಿ ಪ್ರತಿಕ್ರಿಯಿಸಿದ್ದಾರೆ, ಆದರೆ ಬಿಜೆಪಿ ನಾಯಕರು ಒಂದು ತಿಂಗಳಿನಿಂದಲೇ ಮಾತನಾಡುತ್ತಿದ್ದಾರೆ,” ಎಂದು ಖರ್ಗೆ ಟೀಕಿಸಿದರು.






