ಬೆಂಗಳೂರು: ರಾಜ್ಯದ ರಾಜಕೀಯ ವಾತಾವರಣ ಮತ್ತೊಮ್ಮೆ ಕಾವು ಪಡೆದಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar)ಅವರ ಭವಿಷ್ಯ ರಾಜಯೋಗಕ್ಕೆ ಅಜ್ಜಯ್ಯನ ಆಶೀರ್ವಾದ ಸಿಕ್ಕಿದೆಯೆಂಬ ಸುದ್ದಿ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.
ಅಜ್ಜಯ್ಯನವರು ನೀಡಿದ ಈ ತಿಂಗಳೇ ಸಿಎಂ ಸ್ಥಾನಕ್ಕೇರಲು ಸುಸಮಯ ಎಂಬ ಸೂಚನೆಯ ನಂತರ ಡಿಕೆಶಿ ಶತಾಯಗತಾಯ ಸಿಎಂ ಕುರ್ಚಿ ಪಡೆಯಲು ಕಸರತ್ತು ಆರಂಭಿಸಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.
ಮೂಲಗಳ ಪ್ರಕಾರ, ಅಜ್ಜಯ್ಯನ ಆದೇಶದಂತೆ ಡಿಕೆಶಿ ಈಗ ಸಿಎಂ ಹುದ್ದೆಗೆ ಸಜ್ಜಾಗುವ ತಯಾರಿಯಲ್ಲಿ ತೊಡಗಿದ್ದಾರೆ. ಡಿಕೆಶಿಗೆ ರಾಜಯೋಗ ಪ್ರಾರಂಭವಾಗಿದ್ದು, “ರಾಜ್ಯ ಮುನ್ನಡೆಸಲು ಇದೇ ಸೂಕ್ತ ಕಾಲ” ಎಂದು ದೈವದ ಸೂಚನೆ ಸಿಕ್ಕಿದೆಯೆಂಬ ಮಾತು ಹರಿದಾಡುತ್ತಿದೆ.
ಈ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿಯಾಗಿರುವ ಡಿಕೆಶಿ ಈಗ ಅಲರ್ಟ್ ಆಗಿದ್ದು, ಸಿಎಂ ಸ್ಥಾನಕ್ಕಾಗಿ ತನ್ನ ರಾಜಕೀಯ ಕಸರತ್ತನ್ನು ಮತ್ತಷ್ಟು ಬಲಪಡಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳಿಂದಾಗಿ ನವೆಂಬರ್ ತಿಂಗಳು ಡಿಕೆಶಿ ರಾಜಯೋಗಕ್ಕೆ ವೇದಿಕೆ ಸಿದ್ಧವಾಗಿದೆಯೆಂಬ ಕುತೂಹಲ ಹೆಚ್ಚಿದೆ.






