ಬೆಂಗಳೂರು: ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದೇವೆಯೋ ಅದಕ್ಕೆ ಮಾತ್ರ ಇಲ್ಲಿ ಕಿಮ್ಮತ್ತು ಇದೆ ಹೊರತು ಬೇರೆಯವರ ಮಾತಿಗೆ ಯಾವ ಅರ್ಥವೂ ಇಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿರುವ ‘ನವೆಂಬರ್ ಕ್ರಾಂತಿ’ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ. ಅವರು, “ನಾವು ಮೊದಲು ಚರ್ಚಿಸಿದ ವಿಷಯಗಳ ಪ್ರಕಾರವೇ ಕೆಲಸ ಮುಂದುವರಿಸುತ್ತಿದ್ದೇವೆ. ಯಾರೋ ಒಬ್ಬರು ಹೇಳಿದ ಮಾತಿಗೆ ಇಲ್ಲಿ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಹಾಗೂ ನಮ್ಮಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮನೋಭಾವವೇ 136 ಕ್ಷೇತ್ರಗಳಲ್ಲಿ ಜಯ ಸಾಧಿಸಲು ಕಾರಣವಾಗಿದೆ ಎಂದು ಹೇಳಿ, ಕಾಂಗ್ರೆಸ್ ಪಕ್ಷದ ಒಳಒಮ್ಮತದ ಮಹತ್ವವನ್ನು ಎತ್ತಿ ಹಿಡಿದರು.






