ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಪ್ಲೇಬ್ಯಾಕ್ ಸಿಂಗರ್ (Playback singer) ಐಶ್ವರ್ಯ ರಂಗರಾಜನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಜೀವನ ಸಂಗಾತಿಯಾಗಿ ಸಾಯಿ ಸ್ವರೂಪ್ ಜೊತೆ ಸಪ್ತಪದಿ ತುಳಿದಿದ್ದಾರೆ.
ಈ ಜೋಡಿ ಕಳೆದ ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಕುಟುಂಬದವರ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ, ಸಂಪ್ರದಾಯಬದ್ಧವಾಗಿ ಮದುವೆ ನೆರವೇರಿತು.
ಐಶ್ವರ್ಯ ರಂಗರಾಜನ್ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಿತ ಹೆಸರು. ಅವರು ತಮ್ಮ ಮಧುರ ಕಂಠದಿಂದ ಅನೇಕ ಹಿಟ್ ಹಾಡುಗಳನ್ನು ನೀಡಿದ್ದು,
‘ಸಲಗ’, ‘ಕ್ರಾಂತಿ’, ‘ಘೋಸ್ಟ್’, ‘ಕೆಜಿಎಫ್’, ‘ಏಕ್ ಲವ್ ಯಾ’ ಸೇರಿದಂತೆ ಹಲವಾರು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಹಾಡಿದ್ದಾರೆ.
ಸಂಗೀತ ವಲಯದ ಹಲವಾರು ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಐಶ್ವರ್ಯ ಮತ್ತು ಸಾಯಿ ಸ್ವರೂಪ್ ದಂಪತಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.






