ಬೆಂಗಳೂರು: ಬಿಹಾರ ಸಂಘಕ್ಕೆ ಬೆಂಗಳೂರಿನಲ್ಲಿ ಜಾಗ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಭರವಸೆಯ ಬಗ್ಗೆ ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
“ಬಿಹಾರಿಗಳಿಗೆ ಕರ್ನಾಟಕದಲ್ಲಿ ಜಾಗ ನೀಡುವುದನ್ನು ನಾವು ಅಪರಾಧವೆಂದು ಭಾವಿಸುವುದಿಲ್ಲ. ಆದರೆ ಬಿಹಾರ ವಿಧಾನಸಭೆ ಚುನಾವಣೆಗೆ ರಾಜಕೀಯ ಲಾಭಕ್ಕಾಗಿ ಜಾಗ ನೀಡುವುದಾಗಿ ಹೇಳುವುದು ಸಣ್ಣತನ,” ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ಅವರು ಮುಂದುವರಿದು, “ಗೋವಾದಲ್ಲಿ ಕನ್ನಡ ಸಂಘಕ್ಕೆ ನಾವು ಜಾಗ ಕೇಳಿದ್ದೇವೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲೂ ಕನ್ನಡ ಭವನಗಳಿವೆ. ಪ್ರಾದೇಶಿಕ ಅಸ್ಮಿತೆ ಆಧರಿಸಿ ರಾಷ್ಟ್ರೀಯತೆ ಒಪ್ಪಿಕೊಂಡಿರುವ ಪಕ್ಷವೇ ಬಿಜೆಪಿ. ಆದರೆ ಕಾಂಗ್ರೆಸ್ ಬಿಹಾರ ಚುನಾವಣೆಗೆ ಆಸೆ ತೋರಿಸುವುದು ಸಣ್ಣತನ,” ಎಂದು ಟೀಕಿಸಿದ್ದಾರೆ.






