ಪಂಜಾಬ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರ ನಡೆ ಇದೀಗ ಸಾಮಾಜಿಕ ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಶ್ರೀ ಮುಕ್ತಸಾರ್ ಸಾಹಿಬ್‌ನ ಐತಿಹಾಸಿಕ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ವೇಳೆ ಸಿಎಂ ಅವರ ಶೂ ಕಾಯಲು ಇಬ್ಬರು ಪೊಲೀಸರನ್ನು ನಿಯೋಜಿಸಿದ್ದ ಘಟನೆ ವಿವಾದ ಸೃಷ್ಟಿಸಿದೆ.
ಘಟನೆಯ ವಿವರಗಳ ಪ್ರಕಾರ, ಸಿಎಂ ಮಾನ್ ಭಾನುವಾರ ದರ್ಬಾರ್ ಸಾಹಿಬ್‌ನ ಗೇಟ್ ನಂ.7ರಲ್ಲಿ ತಮ್ಮ ಶೂಗಳನ್ನು ಬಿಟ್ಟು ಒಳಗೆ ಪ್ರವೇಶಿಸಿದಾಗ, ರೂಪ್ ಸಿಂಗ್ ಮತ್ತು ಸರ್ಬತ್ ಸಿಂಗ್ ಎಂಬ ಇಬ್ಬರು ಪೇದೆಗಳು ಶೂ ಕಾಯಲು ನೇಮಿಸಲ್ಪಟ್ಟಿದ್ದರು.
ಪೇದೆಗಳು ಸಮವಸ್ತ್ರವಿಲ್ಲದೆ ಸಾಮಾನ್ಯ ಉಡುಪಿನಲ್ಲಿ ಕರ್ತವ್ಯ ನಿರ್ವಹಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಯೇ ಅವರನ್ನು ನಿಯೋಜಿಸಿದ್ದಾರಂತೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಹೊರಬಂದ ನಂತರ ವಿರೋಧ ಪಕ್ಷಗಳು ಸಿಎಂ ಮಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ






