Home State Politics National More
STATE NEWS

ರೇಣುಕಾಸ್ವಾಮಿ ಕೊಲೆ ಕೇಸ್ Trial ಆರಂಭ — ಕೋರ್ಟ್‌ನಲ್ಲಿ ಕಿಕ್ಕಿರಿದ ವಕೀಲರು

Darshan case
Posted By: Meghana Gowda
Updated on: Nov 3, 2025 | 9:56 AM

ಬೆಂಗಳೂರು: ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಹೊಸ ಹಂತಕ್ಕೆ ಕಾಲಿಟ್ಟಿದೆ. ಬೆಂಗಳೂರು 64ನೇ ಸೆಷನ್ಸ್ ಕೋರ್ಟ್ನಲ್ಲಿ ನಟ ದರ್ಶನ್(Darshan) , ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಪ್ರಕ್ರಿಯೆ ಆರಂಭವಾಗಿದೆ.

‘ಡಿ ಗ್ಯಾಂಗ್ ಕೇಸ್’ ಎಂದೇ ಹೆಸರಾಗಿರುವ ಈ ಪ್ರಕರಣದ ವಿಚಾರಣೆಗೆ ಕೋರ್ಟ್‌ನಲ್ಲಿ ವಕೀಲರ ಭಾರೀ ಗುಂಪು ಸೇರಿತ್ತು. ಕೋರ್ಟ್ ಹಾಲ್ ಸಂಪೂರ್ಣವಾಗಿ ತುಂಬಿಹೋದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಹಾಸ್ಯಮಯವಾಗಿ,“ಇಷ್ಟು ಜನ ಇದ್ದರೆ ವಿಚಾರಣೆ ಹೇಗೆ ಮಾಡೋದು?”
ಎಂದು ನಕ್ಕು ಹೇಳಿದ್ದಾರೆ.

ನ್ಯಾಯಾಧೀಶರು ಇದೇ ವೇಳೆ ಈ ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರು ಮಾತ್ರ ಒಳಗಡೆ ಇರಲಿ. ಇತರರು ದಯವಿಟ್ಟು ಹೊರಗಡೆ ಇರಬೇಕು. ಇಲ್ಲವಾದರೆ ವಿಚಾರಣೆ ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Shorts Shorts