ಬಾಗಲಕೋಟೆ: ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಮನಕಲಕುವ ಘಟನೆ ನಡೆದಿದೆ. ಶಶಿಧರ (40) ಹೃದಯಾಘಾತದಿಂದ (heart-attack) ಮೃತಪಟ್ಟಿದ್ದು, ಪತಿ ಸಾವಿನ ಸುದ್ದಿ ಕೇಳಿದ ಪತ್ನಿ ಸರೋಜಾ (35) ಕೂಡ ಮನೆಯಲ್ಲಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:
Deadly Accident: ಡ್ಯಾನ್ಸರ್ ಸಾವು
ಮೃತ ದಂಪತಿ ಹದಿನೈದು ವರ್ಷಗಳ ಹಿಂದೆ ಮದುವೆಯಾದವರು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಶಶಿಧರ ಚಿನ್ನದ ಅಂಗಡಿ ನಡೆಸುತ್ತಿದ್ದರು. ಪತಿಯ ನಿಧನದ ದುಃಖ ತಾಳಲಾರದ ಸರೋಜಾ, ಆಘಾತದಿಂದ ಬಿದ್ದು ಪ್ರಾಣ ಬಿಟ್ಟಿದ್ದಾರೆ.
ಘಟನೆಯ ನಂತರ ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಸಂಬಂಧಿಕರು ಆಕ್ರಂದನ ಮೊಳಗಿಸಿದ್ದಾರೆ. ಸ್ಥಳೀಯರು ಈ ಘಟನೆಗೆ ದುಃಖ ವ್ಯಕ್ತಪಡಿಸಿದ್ದಾರೆ.






