ಬೆಂಗಳೂರು: ರಾಜ್ಯ ರಾಜಕೀಯ ಕ್ಷೇತ್ರಕ್ಕೆ ಶೋಚನೀಯ ಸುದ್ದಿ. ಮಾಜಿ ಸಚಿವ (Former minister) ಎಚ್.ವೈ. ಮೇಟಿ (HY Meti) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಹಿರಿಯ ಕಾಂಗ್ರೆಸ್ (Congress) ನಾಯಕರಾಗಿದ್ದ ಮೇಟಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು.
ಅವರ ನಿಧನದಿಂದ ರಾಜಕೀಯ ವಲಯದಲ್ಲಿ ದುಃಖದ ಅಲೆ ಹರಡಿದ್ದು, ಅನೇಕ ರಾಜಕಾರಣಿಗಳು ಮತ್ತು ಬೆಂಬಲಿಗರು ಸಂತಾಪ ಸೂಚಿಸಿದ್ದಾರೆ.






