ಬೆಂಗಳೂರು: ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ (Electric Bus) ಗಳಲ್ಲಿ ತಾಂತ್ರಿಕ ದೋಷಗಳ ಸರಮಾಲೆ ಮುಂದುವರಿದಿದೆ. ಇತ್ತೀಚಿನ ಘಟನೆಯಲ್ಲಿ, ಬಸ್‌ನ ಬಾಗಿಲು ಏಕಾಏಕಿ ಮುಚ್ಚಿಕೊಂಡ ಪರಿಣಾಮ ಒಬ್ಬ ಪ್ರಯಾಣಿಕನಿಗೆ ಗಂಭೀರ ಗಾಯವಾಗಿದೆ.
ಘಟನೆ ಯಲಹಂಕದ ಪಾಲನಹಳ್ಳಿಯಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ. ಪ್ರಯಾಣಿಕ ಬಸ್‌ನಿಂದ ಇಳಿಯುವ ಸಮಯದಲ್ಲಿ ಡೋರ್ ಕ್ಲೋಸ್ ಆಗಿದ್ದು, ಅವನ ಕಾಲು ಹಾಗೂ ಕೈ ಸಿಕ್ಕಿಕೊಂಡು ಬಿದ್ದ ಪರಿಣಾಮ ಗಂಭೀರ ಗಾಯವಾಗಿದೆ.
ತಕ್ಷಣ ಸ್ಥಳೀಯರು ಹಾಗೂ ಆಂಬುಲೆನ್ಸ್ ಚಾಲಕರು ಸಹಾಯಕ್ಕೆ ಧಾವಿಸಿ ಗಾಯಗೊಂಡ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.






