ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಮಾತಿನ ಯುದ್ಧ ಶುರುವಾದಂತಾಗಿದೆ. ನಟ ದರ್ಶನ್ (Darshan) ಕುರಿತು ನಿರ್ಮಾಪಕ ಉಮಾಪತಿ ಎಸ್. ಗೌಡ (Umapathy S Gowda) ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಒಂದು ಚಿತ್ರ ಯಶಸ್ವಿಯಾಗುವುದಕ್ಕೆ ನಟನಿಗಿಂತ ನಿರ್ಮಾಪಕ ಮತ್ತು ನಿರ್ದೇಶಕರ ಪಾತ್ರವೇ ಮುಖ್ಯ. ಈ ಹಿಂದೆ “ಒಬ್ಬರು ಹೇಳಿದ್ರು — ನಿರ್ಮಾಪಕನಿಂದ ಸಿನಿಮಾ ಆಗುತ್ತೆ ಅಂತ. ಆದರೆ ನಿಜ ಹೇಳಬೇಕೆಂದರೆ ನಿರ್ಮಾಪಕರು, ನಿರ್ದೇಶಕರು ಸೇರಿದಾಗ ಮಾತ್ರ ಸ್ಟಾರ್ ಹುಟ್ಟುತ್ತಾನೆ.
ಸಿನಿಮಾ ಸ್ಟಾರ್ ಆದ ಮೇಲೆ ಕೆಲವರು ನಿರ್ಮಾಪಕರನ್ನು ಮರೆತು ಫ್ಯಾನ್ಸ್ ಕ್ಲಬ್ ಕಟ್ಟಿಕೊಳ್ಳುತ್ತಾರೆ. ಕೆಲವು ಕ್ಯಾಂಪೇನ್‌ಗಳಿಗೆ ಕರೆದುಕೊಂಡು ಹೋಗಿ ಅನ್ನ ಹಾಕಿದ್ರೆ, ಅವರನ್ನು ‘ಅನ್ನದಾತರು’ ಅಂತ ಕರೆಯುತ್ತಾರೆ. ಆದರೆ ಪ್ರತಿ ದಿನ ಅನ್ನ ಕೊಡುವವರು ಮಾತ್ರ ನಿಜವಾದ ಅನ್ನದಾತರು, ವರ್ಷಕ್ಕೆ ಒಮ್ಮೆ ಅನ್ನ ಹಾಕುವವರು ಅಲ್ಲ,” ಎಂದು ಟೀಕಿಸಿದರು.
ನಿರ್ಮಾಪಕರು, ನಿರ್ದೇಶಕರು ಮತ್ತು ಜನರು ಸೇರಿ ಸ್ಟಾರ್ ಮಾಡುತ್ತಾರೆ. ಹರ್ಷದ ಕೂಳಿಗೆ ವರ್ಷದ ಕೂಳು ಕಳೆದುಕೊಂಡ ಉದಾಹರಣೆ ಇದೆ. ನಾನು ಸಹಾಯ ಪಡೆದರೆ, ಹತ್ತು ಜನರ ಮುಂದೆ ಹೇಳುತ್ತೇನೆ. ಸಹಾಯ ಮಾಡಿದವರನ್ನು ಸಾಯುವವರೆಗೆ ನೆನಪಿಡಬೇಕು. ಕೃತಜ್ಞತೆಯನ್ನು ಮರೆತರೆ ಜೀವನದ ಅರ್ಥವೇ ಇಲ್ಲ,” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.






