Home State Politics National More
STATE NEWS

ಸಮೀಕ್ಷೆ ಕಾರ್ಯ ಮುಗಿದರೂ ಗಣತಿದಾರರಿಗೆ ಮುಗಿಯದ ಸಂಕಷ್ಟ — No Salary, No Leave!

Samikshe
Posted By: Meghana Gowda
Updated on: Nov 4, 2025 | 4:55 AM

ಬೆಂಗಳೂರು: ರಾಜ್ಯಾದ್ಯಂತ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಗಿದರೂ, ಅದರಲ್ಲಿ ಭಾಗಿಯಾದ ಗಣತಿದಾರರ ಸಂಕಷ್ಟ ಇನ್ನೂ ಅಂತ್ಯ ಕಂಡಿಲ್ಲ. ಕೆಲಸ ಮುಗಿಸಿದ ಬಳಿಕವೂ ಸಂಬಳ ಸಿಗದೆ, ರಜೆ ಇಲ್ಲದ ಪರಿಸ್ಥಿತಿ ಉಂಟಾಗಿದೆ.

ಕೆಲಸ ಮಾಡದಿರುವ ಆರೋಪದ ಮೇರೆಗೆ GBA (Backward Classes Welfare Department) ನಿಂದ ನೂರಾರು ಗಣತಿದಾರರಿಗೆ ನೋಟಿಸ್‌ಗಳು ಜಾರಿಯಾಗಿವೆ. ನಿಜವಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದವರಿಗೂ “ಕೆಲಸ ಮಾಡಿಲ್ಲ” ಎಂಬ ಕಾರಣ ನೀಡಿ ನೋಟಿಸ್‌ ನೀಡಿರುವುದರಿಂದ, ಅನೇಕ ಸಿಬ್ಬಂದಿ ಅಚ್ಚರಿಗೊಳಗಾಗಿದ್ದಾರೆ.

ಒಂದು ತಿಂಗಳಿನಿಂದ ಹಬ್ಬ, ರಜೆಗಳನ್ನೆಲ್ಲ ಬಿಟ್ಟು ಕೆಲಸ ಮಾಡಿದ ಗಣತಿದಾರರು ಈಗ ಸಂಬಳ ಕಟ್ ಆಗುವ ಭಯದಲ್ಲಿದ್ದಾರೆ. ಕೆಲವರು ತಮ್ಮ ಸಮೀಕ್ಷೆ ಹಾಜರಾತಿಯ ಸಾಕ್ಷಿಯಾಗಿ ಆ್ಯಪ್‌ನ ಸ್ಕ್ರೀನ್‌ಶಾಟ್‌ಗಳನ್ನು ತಂದು GBA ಮುಖ್ಯ ಆಯುಕ್ತರಿಗೆ ನೀಡಿದರೂ, ಸಮಸ್ಯೆ ಬಗೆಹರಿಯದಂತಾಗಿದೆ.

ಈ ಘಟನೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗಣತಿದಾರರ ಅಸಮಾಧಾನಕ್ಕೆ ಕಾರಣವಾಗಿದ್ದು, GBA ಇಲಾಖೆಯ ಕಾರ್ಯನಿರ್ವಹಣೆಯ ಮೇಲೂ ಪ್ರಶ್ನೆಗಳು ಉದ್ಭವಿಸಿದ್ದಾವೆ.

Shorts Shorts