ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEAB) 2025-2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ (Karnataka SSLC 2026 Final Exam Timetable) ಯ ವೇಳಾಪಟ್ಟಿ ಪ್ರಕಟಿಸಿದೆ. ರಾಜ್ಯದಾದ್ಯಂತ ಹತ್ತನೇ ತರಗತಿ ವಿದ್ಯಾರ್ಥಿಗಳು ಕಾದಿದ್ದ ವೇಳಾಪಟ್ಟಿ ಇದೀಗ ಅಧಿಕೃತವಾಗಿ ಬಿಡುಗಡೆಯಾಗಿದೆ.
ಪರೀಕ್ಷೆಗಳು ಮಾರ್ಚ್ 18- 2026 ರಿಂದ ಪ್ರಾರಂಭವಾಗಿ ಏಪ್ರಿಲ್ 2, 2026ರವರೆಗೆ (March 18 to April 2, 2026) ನಡೆಯಲಿವೆ. ಪ್ರತಿ ದಿನ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆ ನಡೆಯಲಿದೆ.
ವಿಷಯವಾರು ವೇಳಾಪಟ್ಟಿ ಹೀಗಿದೆ:
ಮಾರ್ಚ್ 18, ಬುಧವಾರ ಪ್ರಥಮ ಭಾಷೆಗಳು : ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ (NCERT) , ಸಂಸ್ಕೃತ.
ಮಾರ್ಚ್ 23, ಸೋಮವಾರ ಕೋರ್ ಸಬ್ಜೆಕ್ಟ್: ವಿಜ್ಞಾನ, ರಾಜ್ಯಶಾಸ್ತ್ರ , ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
ಮಾರ್ಚ್ 25, ಬುಧವಾರ ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ.
ಮಾರ್ಚ್ 28, ಶನಿವಾರ ಕೋರ್ ಸಬ್ಜೆಕ್ಟ್: ಗಣಿತ, ಸಮಾಜಶಾಸ್ತ್ರ
ಮಾರ್ಚ್ 30, ಸೋಮವಾರ ತೃತೀಯ ಭಾಷೆಗಳು: ಹಿಂದಿ(NCERT), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಹಾಗೂ ಎನ್.ಎಸ್.ಕ್ಯೂ.ಎಫ್. ವಿಷಯಗಳು \
ಏಪ್ರಿಲ್ 01, ಬುಧವಾರ ಜೆ.ಟಿ.ಎಸ್. ವಿಷಯಗಳು: ಅರ್ಥಶಾಸ್ತ್ರ
ಏಪ್ರಿಲ್ 02, ಗುರುವಾರ ಕೋರ್ ಸಬ್ಜೆಕ್ಟ್: ಸಮಾಜ ವಿಜ್ಞಾನ
ಮಂಡಳಿಯ ಪ್ರಕಾರ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಫೆಬ್ರವರಿ ಅಂತ್ಯದೊಳಗೆ ಶಾಲೆಗಳ ಮೂಲಕ ಪಡೆಯಬಹುದು. ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಅಕ್ರಮ, ಕೃತಕೋಪಾಯ, ಅಥವಾ ಮೊಬೈಲ್ ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ.






