ಬೆಂಗಳೂರು: ಬೆಂಗಳೂರು ಮೆಟ್ರೋ (Namma Metro) ರೈಲು ನಿಗಮ ನಿಯಮಿತ (BMRCL) ಪ್ರತಿ ವರ್ಷ ದರ ಏರಿಕೆ ಮಾಡುವ ನಿರ್ಧಾರ ಮತ್ತು ಇತ್ತೀಚಿನ ದರ ಪರಿಷ್ಕರಣೆಯಲ್ಲಿನ ಅವೈಜ್ಞಾನಿಕ ಮಾನದಂಡಗಳ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya)ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೆಟ್ರೋ ದರ ಏರಿಕೆ ಕುರಿತು ಸ್ಪಷ್ಟನೆ ನೀಡಲು ಅವರು BMRCL ಗೆ ಒಂದು ವಾರದ ಡೆಡ್‌ಲೈನ್ (deadline) ನೀಡಿದ್ದಾರೆ.
ಪ್ರತಿ ವರ್ಷ ಶೇ. 5ರಷ್ಟು ದರ ಏರಿಕೆ ಮಾಡುವ ಮೆಟ್ರೋ ನಿರ್ಧಾರವು ಜನರ ಮೇಲೆ ಅನಗತ್ಯ ಹೊರೆಯಾಗಿದೆ. ದರ ಏರಿಕೆ ಪರಿಶೀಲನಾ ಸಮಿತಿ (Fair Fixation Committee) ಶೇ. 51.55 ರಷ್ಟು ಹೆಚ್ಚಳಕ್ಕೆ ಮಾತ್ರ ಅನುಮತಿ ನೀಡಿತ್ತು. ಆದರೆ ನಮ್ಮ ಮೆಟ್ರೋ ಅದನ್ನು ಮೀರಿ ಶೇ. 71.5 ರಷ್ಟು ಟಿಕೆಟ್ ದರ ಏರಿಕೆ ಮಾಡಿದೆ.
2017ರಲ್ಲಿ ದರ ಏರಿಕೆ ಮಾಡುವಾಗ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ₹6 ಇತ್ತು. ಆದರೆ 2025ರಲ್ಲಿ ವಿದ್ಯುತ್ ದರ ಯೂನಿಟ್‌ಗೆ ಕೇವಲ ₹5.25 ಪೈಸೆಯಷ್ಟಿದೆ. ವಿದ್ಯುತ್ ದರ ಕಡಿಮೆ ಇದ್ದರೂ ಶೇ. 105.5 ರಷ್ಟು ದರ ಏರಿಕೆಗೆ ಮನವಿ ಮಾಡಿದ್ದು ವಿಚಿತ್ರವಾಗಿದ್ದು, BMRCL ಪ್ರತಿ ವರ್ಷ ಫೆಬ್ರವರಿಯಲ್ಲಿ ಶೇ. 5ರಷ್ಟು ಟಿಕೆಟ್ ದರ ಏರಿಕೆ ಮಾಡುವುದನ್ನು ಪದ್ಧತಿಯನ್ನಾಗಿ ಮಾಡಿಕೊಂಡಿದೆ.
2025 ರ ಫೆಬ್ರವರಿ 9 ರಿಂದ ಶೇ. 105 ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಸಾರ್ವಜನಿಕರ ತೀವ್ರ ಆಕ್ರೋಶದಿಂದಾಗಿ ಫೆಬ್ರವರಿ 13 ರಂದು ದರವನ್ನು ಶೇ. 71.5ಕ್ಕೆ ಇಳಿಕೆ ಮಾಡಲಾಗಿತ್ತು. ಇವಾಗ ಮತ್ತೆ ಏರಿಗೆ ಮಾಡುತ್ತಿರುವ ನಿರ್ಧಾರ ಸರಿಯುಲ್ಲದೇ ಇರುವುದರಿಂದ, ಮೆಟ್ರೋ ದರ ಏರಿಕೆ ಕುರಿತಂತೆ ‘ಫೇರ್ ಫಿಕ್ಸೇಷನ್ ಕಮಿಟಿ’ (Fare Fixation Committee)ತನ್ನ ವರದಿಯನ್ನು ಒಂದು ವಾರದಲ್ಲಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ BMRCL ನೀಡುವ ಉತ್ತರದ ಆಧಾರದ ಮೇಲೆ, ಬಿಜೆಪಿ ನಿಯೋಗವು ಮುಂದಿನ ಹೋರಾಟದ ನಡೆ ಬಗ್ಗೆ ಯೋಜನೆ ರೂಪಿಸಲಿದೆ ಎಂದು ಹೇಳಿದ್ದಾರೆ.






