Home State Politics National More
STATE NEWS

Metroದಲ್ಲಿ ಕೈ ಕೊಟ್ಟ ಸ್ಮಾರ್ಟ್ ಟಿಕೆಟ್ ಯಂತ್ರಗಳು: ಸಾರ್ವಜನಿಕರಿಗೆ ಫಜೀತಿ

Metro (1)
Posted By: Meghana Gowda
Updated on: Nov 5, 2025 | 9:47 AM

ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಕರ ಅನುಕೂಲಕ್ಕಾಗಿ ಅಳವಡಿಸಲಾಗಿದ್ದ ಸ್ಮಾರ್ಟ್ ಟಿಕೆಟ್ ವಿತರಣಾ ಯಂತ್ರಗಳು ಅಳವಡಿಕೆ ಮಾಡಿದ ಕೇವಲ ಎರಡು-ಮೂರು ತಿಂಗಳಲ್ಲೇ ಕೈಕೊಟ್ಟಿವೆ. ಜನದಟ್ಟಣೆಯ ಸಮಯದಲ್ಲಿ ಸರತಿ ಸಾಲನ್ನು ತಪ್ಪಿಸಲು ಜಾರಿಗೆ ತಂದಿದ್ದ ಈ ಹೊಸ ತಂತ್ರಜ್ಞಾನದ ಪ್ರಯೋಗಕ್ಕೆ ಇದೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ಟಿಕೆಟ್ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಬಿಎಮ್‌ಆರ್‌ಸಿಎಲ್‌ (BMRCL) ಈ ಹೊಸ ಟಿಕೆಟ್ ಮಿಷನ್‌ಗಳ (Ticket Machine) ನ್ನು ಅಳವಡಿಸಿತ್ತು.ಈ ಹೊಸ ಯಂತ್ರಗಳು ಎಟಿಎಂ (ATM) ಮಾದರಿಯಲ್ಲಿಯೇ ಇದ್ದು, ಪ್ರಯಾಣಿಕರು ಫೋನ್‌ಪೇ (PhonePe), ಗೂಗಲ್‌ಪೇ (Google Pay) ಅಥವಾ ಇತರ ಯುಪಿಐ (UPI) ವಿಧಾನದ ಮೂಲಕ ಸ್ಕ್ಯಾನ್ ಮಾಡಿದರೆ, ಕೇವಲ 30 ಸೆಕೆಂಡ್‌ಗಳಲ್ಲಿ QR ಕೋಡ್ ಟಿಕೆಟ್‌ ಕೈ ಸೇರುತ್ತಿತ್ತು.

ಈ ಹೊಸ ಮತ್ತು ಸುಲಭ ಟಿಕೆಟ್ ವಿತರಣಾ ವಿಧಾನವನ್ನು ಟಿನ್ ಫ್ಯಾಕ್ಟರಿ (Tin Factory) ಮತ್ತು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಆದರೆ ಹೊಸ ತಂತ್ರಜ್ಞಾನ ಅಳವಡಿಸಿದ ಎರಡು ಅಥವಾ ಮೂರು ತಿಂಗಳಲ್ಲೇ ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಟಿಕೆಟ್ ಯಂತ್ರಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ. ಜನದಟ್ಟಣೆಯ ಸಮಸ್ಯೆಗೆ ಕಡಿವಾಣ ಹಾಕಲು ಯತ್ನಿಸಿದ್ದ BMRCL ಗೆ ಇದು ಹಿನ್ನಡೆಯಾಗಿದ್ದು, ಎಲ್ಲಾ ಮಿಷನ್‌ಗಳನ್ನು ಆಫ್ ಮಾಡಲಾಗಿದೆ.

Shorts Shorts