ಚೆನ್ನೈ: ತಮಿಳು ಮತ್ತು ಕನ್ನಡ ಸಿನಿಪ್ರೇಮಿಗಳಿಗೆ ದೊಡ್ಡ ಸುದ್ದಿ! ಸೂಪರ್‌ಸ್ಟಾರ್ ರಜನಿಕಾಂತ್ (Rajinikanth)ಅವರ 173ನೇ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಈ ಚಿತ್ರವನ್ನು ಉಳಗನಾಯಗನ್ ಕಮಲ್ ಹಾಸನ್ (Kamal Haasan) ಅವರದೇ ನಿರ್ಮಾಣ (production) ಸಂಸ್ಥೆಯಾದ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ನಿರ್ಮಾಣ ಮಾಡಲಿದೆ.
ಇದೇ ಮೊದಲ ಬಾರಿ ನಿರ್ಮಾಣ-ನಟನೆಯ ರೂಪದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ ಖುಷ್ಬು ಸುಂದರ್ ಅವರ ಪತಿ ಆಗಿರುವ ಖ್ಯಾತ ನಿರ್ದೇಶಕ ಸಿ. ಸುಂದರ್ (directed C. Sundar)ಅವರು ನಿರ್ದೇಶನ ಮಾಡಲಿದ್ದಾರೆ. ಸಿ. ಸುಂದರ್ ಈ ಹಿಂದೆ ರಜನಿಕಾಂತ್‌ಗೆ ಅರುಣಾಚಲಂ ಎಂಬ ಬ್ಲಾಕ್‌ಬಸ್ಟರ್ ಹಿಟ್ ನೀಡಿದ್ದರೆ, ಮತ್ತು ಕಮಲ್ ಹಾಸನ್‌ಗೆ ಅನ್ಬೆ ಶಿವಂ ಚಿತ್ರವನ್ನು ನಿರ್ದೇಶಿಸಿದ್ದರು.
ರಿಲೀಸ್ ಪ್ಲಾನ್: ಕಮಲ್ ಹಾಸನ್ ನಿರ್ಮಿಸುತ್ತಿರುವ, ಸಿ. ಸುಂದರ್ ನಿರ್ದೇಶನದ, ರಜನಿಕಾಂತ್ ಅಭಿನಯದ ಈ ಚಿತ್ರವನ್ನು 2027ರ ಪೊಂಗಲ್ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಮಾಡಿದೆ. ಹಾಗೂ ಈ ಪ್ರಾಜೆಕ್ಟ್‌ನ ಅಧಿಕೃತ ಶೀರ್ಷಿಕೆ ಮತ್ತು ನಟ–ತಂಡದ ವಿವರಗಳನ್ನು ಶೀಘ್ರದಲ್ಲೇ ಘೋಷಣೆ ಮಾಡುವ ನಿರೀಕ್ಷೆ ಇದೆ.






