Home State Politics National More
STATE NEWS

Transfer Order ರಾಜ್ಯದಲ್ಲಿ 120 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ!

Police inspectors transfer order from director gen
Posted By: Sagaradventure
Updated on: Nov 6, 2025 | 6:00 AM

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆದಿದ್ದು, ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟ‌ರ್ ಜನರಲ್ ಆಫ್ ಪೊಲೀಸ್‌ರವರ ಕಚೇರಿಯು (ಡಿಜಿ-ಐಜಿಪಿ) ತಕ್ಷಣದಿಂದಲೇ ಜಾರಿಗೆ ಬರುವಂತೆ ಹಲವು ಪೊಲೀಸ್‌ ಇನ್ಸ್‌ಪೆಕ್ಟರ್‌ (ಸಿವಿಲ್) ವೃಂದದ ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಪೊಲೀಸ್‌ ಸಿಬ್ಬಂದಿ ಮಂಡಳಿಯ ನಿರ್ಣಯದ ಮೇರೆಗೆ ಈ ವರ್ಗಾವಣೆ ನಡೆದಿದೆ.

ಮಂಡಳಿಯ ಸಭೆಯಲ್ಲಿ ನಿರ್ಣಯ:
ಕಳೆದ ದಿನಾಂಕ 05.11.2025 ರಂದು ನಡೆದ ಪೊಲೀಸ್‌ ಸಿಬ್ಬಂದಿ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಅನ್ವಯ, ಈ ಕೆಳಕಂಡ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳನ್ನು ಅವರುಗಳ ಹೆಸರಿನ ಮುಂದೆ ನಮೂದಿಸಲಾದ ಹೊಸ ಸ್ಥಳಗಳಿಗೆ ನಿಯೋಜಿಸಲಾಗಿದೆ. ಈ ಆದೇಶವು ಈಗಾಗಲೇ ಜಾರಿಯಲ್ಲಿರುವ 07.03.2025 ರಿಂದ 06.10.2025 ರವರೆಗಿನ ವಿವಿಧ ದಿನಾಂಕಗಳ ಆದೇಶಗಳನ್ನು ಮತ್ತು ಮಂಡಳಿಯ ನಡವಳಿಯನ್ನು ಉಲ್ಲೇಖಿಸಿದೆ.

Shorts Shorts