Home State Politics National More
STATE NEWS

ರಶ್ಮಿಕಾ-ವಿಜಯ್ ಕಲ್ಯಾಣ Fixed! ಅಧಿಕೃತ ಘೋಷಣೆಯೊಂದೇ ಬಾಕಿ

Rashmika
Posted By: Meghana Gowda
Updated on: Nov 6, 2025 | 12:34 PM

ಹೈದರಾಬಾದ್/ಬೆಂಗಳೂರು: ಟಾಲಿವುಡ್‌ನ ಬಹುನಿರೀಕ್ಷಿತ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Rashmika Mandanna and Vijay Deverakonda) ಅವರ ಮದುವೆಗೆ ದಿನಾಂಕ ನಿಗದಿಯಾಗಿದೆ ಎಂಬ ಸುದ್ದಿ ಇದೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ಗುಟ್ಟಾಗಿ ಪ್ರೀತಿ ಮಾಡುತ್ತಿರುವ ಈ ಜೋಡಿ, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ಅವರ ವಿವಾಹವು (wedding)ಫೆಬ್ರವರಿ 26, 2026 ರಂದು ನಡೆಯಲಿದೆ. ಈ ಸ್ಟಾರ್ ಜೋಡಿ ರಾಜಸ್ಥಾನದಲ್ಲಿ ಐಷಾರಾಮಿ ಡೆಸ್ಟಿನೇಷನ್ ವೆಡ್ಡಿಂಗ್ (Destination Wedding) ಮಾಡಲು ನಿರ್ಧರಿಸಿದ್ದು, ರಾಜಸ್ಥಾನದ ಅರಮನೆಯೊಂದರಲ್ಲಿ ನಡೆಯುತ್ತದೆ ಎಂದು ತಿಳಿದು ಬಂದಿದೆ

ಈ ಹಿಂದೆಯೇ ಅಂದರೆ, ಅಕ್ಟೋಬರ್ 3, 2025 ರಂದು ಹೈದರಾಬಾದ್‌ನಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ನಿಶ್ಚಿತಾರ್ಥವು ಕೇವಲ ಆಪ್ತರು ಮತ್ತು ಕುಟುಂಬದ ಸಮ್ಮುಖದಲ್ಲಿ ಗುಟ್ಟಾಗಿ ನೆರವೇರಿತ್ತು ಎಂಬ ಸುದ್ದಿ ಕೂಡಾ ಭಾರೀ ಸದ್ದು ಮಾಡಿತ್ತು.

ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಜೋಡಿ, ತಮ್ಮ ಸಂಬಂಧದ ಬಗ್ಗೆ ಎಂದಿಗೂ ಬಹಿರಂಗಪಡಿಸಿರಲಿಲ್ಲ. ಆದರೆ, ಇತ್ತೀಚೆಗೆ ತಮ್ಮ ಒಂದು ಚಿತ್ರದ ಪ್ರಚಾರದ ವೇಳೆ ರಶ್ಮಿಕಾ, ನಿಶ್ಚಿತಾರ್ಥದ ಬಗ್ಗೆ ಕೇಳಿದಾಗ ನಗುತ್ತಾ, “ಎಲ್ಲರಿಗೂ ಇದರ ಬಗ್ಗೆ ತಿಳಿದಿದೆ,” ಎಂಬ ಉತ್ತರ ನೀಡಿದ್ದು, ಮದುವೆಯ ಸುದ್ದಿಗೆ ಮತ್ತಷ್ಟು ಇಂಬು ನೀಡಿದಂತಾಗಿದೆ.

Shorts Shorts