ಬೆಂಗಳೂರು: ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆ 10 ವರ್ಷಕ್ಕಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದರೆ, ಆ ಹಣ ಈಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ (DEA Fund) ಯಲ್ಲಿ ಇರಲಿದ್ದು, ಆ ಹಣವನ್ನು ಹಿಮಪಡೆಯುವ ಅವಕಾಶ ಇನ್ನೂ ಇದೆ ಎಂದು RBI ತಿಳಿಸಿದೆ.
ಹಣವನ್ನು ಹೇಗೆ ಹಿಂಪಡೆಯಬಹುದು:
RBI ನ ಉದ್ಗಮ್ (UDGAM portal.) ಪೋರ್ಟಲ್‌ಗೆ ಭೇಟಿ ನೀಡಿ: https://udgam.rbi.org.in
ನಿಮ್ಮ ಅಥವಾ ನಿಮ್ಮ ಕುಟುಂಬದವರ ಖಾತೆ/ಹೆಸರು ನಮೂದಿಸಿ, ಕ್ಲೇಮ್ ಮಾಡದ ಠೇವಣಿಗಳನ್ನು ಪರಿಶೀಲಿಸಿ. ನಂತರ, ನಿಮ್ಮ ಬ್ಯಾಂಕಿನ ಹತ್ತಿರದ ಶಾಖೆಗೆ ಭೇಟಿ ನೀಡಿ ಅಗತ್ಯವಾದ KYC ದಾಖಲೆಗಳು (ಆಧಾರ್, ಪಾಸ್‌ಪೋರ್ಟ್, ಮತದಾರರ ಚೀಟಿ ಅಥವಾ ಚಾಲನಾ ಪರವಾನಗಿ) ಸಲ್ಲಿಸಿ, ಬ್ಯಾಂಕ್ ದೃಢೀಕರಣದ ನಂತರ, ಹಣವನ್ನು ಬಡ್ಡಿಯೊಂದಿಗೆ ಹಿಂತೆಗೆದುಕೊಳ್ಳಬಹುದು.






