ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (C.M Siddaramaiah)ಅವರು ಪ್ರತಿಕ್ರಿಯೆ ನೀಡಿದ್ದು, “ರೈತರ ಚಿಂತೆಗಳನ್ನು ನಮ್ಮ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಹಾಗೂ ನಾವು ರೈತರ ಪರವಾಗಿ ನಿಂತಿರುವ ಸರ್ಕಾರ” ಎಂದರು.
ರೈತರ ಸಮಸ್ಯೆ ಕುರಿಂತೆ ತಿಳಿದುಕೊಳ್ಳಲು ಸಚಿವರಾದ, ಎಂ.ಬಿ. ಪಾಟೀಲ್ (M.B. Patil), ಹೆಚ್.ಕೆ. ಪಾಟೀಲ್ (H.K. Patil) ಹಾಗೂ ತಿಮ್ಮಾಪುರ್ (Timmappa) ರನ್ನು ರೈತರೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಿದ್ದವು ಹಾಗೂ ಪ್ರತಿಭಟನೆ ಸ್ಥಳಕ್ಕೆ ಡಿಸಿ ಹಾಗೂ ಎಸ್‌ಪಿಯವರನ್ನು ಕೂಡ ಕಳುಹಿಸಿದ್ದೇ.
ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿಯನ್ನು ನಿರ್ಧರಿಸುತ್ತಿದ್ದು, “ರಾಜ್ಯ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ”. “ನಾವು 270 ಕೋಟಿ ಲೀಟರ್ ಉತ್ಪಾದನೆ ಮಾಡುತ್ತಿದ್ದೇವೆ, ಆದರೆ ಹಂಚಿಕೆ ಕೇವಲ 41 ಕೋಟಿ ಲೀಟರ್ ಮಾತ್ರ” ಎಂದು ಸಿಎಂ ಆರೋಪಿಸಿದರು.
ನಾವು ಅಧಿಕಾರಕ್ಕೆ ಬಂದ ಬಳಿಕ ಹನ್ನೊಂದು ಜಾಗಗಳಲ್ಲಿ ಡಿಜಿಟಲ್ ತೂಕದ (digital weighing systems) ವ್ಯವಸ್ಥೆ ಪ್ರಾರಂಭಿಸಿದ್ದೇವೆ. ತೂಕ, ಇಳುವರಿ, ಕಟಾವು ಹಾಗೂ ಬಿಲ್ ಪಾವತಿ ಕುರಿತಂತೆ ಸಮಿತಿಯನ್ನು ರಚಿಸಿದ್ದೇವೆ ಎಂದು ಹೇಳಿದರು.
ವಿರೋಧ ಪಕ್ಷಗಳು ರೈತರಿಗೆ ತಪ್ಪು ಮಾಹಿತಿ ನೀಡುತ್ತಿವೆ. ರೈತರು ಅವರ ಮಾತುಗಳಿಗೆ ಮರುಳಾಗಬೇಡಿ. ನಾಳೆ (ಶುಕ್ರವಾರ) ಬೆಳಗ್ಗೆ 11 ಗಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಹಾಗೂ ಮಧ್ಯಾಹ್ನ ರೈತರ ಮುಖಂಡರ ಸಭೆ ಕರೆದಿರುವುದಾಗಿದೆ ಎಂದರು.
ಈ ಸಮಸ್ಯೆ ಕುರಿತಂತೆ ನಾಳೆಯೇ ಪ್ರಧಾನಿ (Prime Minister)ಅವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ನೀಡುವಂತೆ ಒತ್ತಾಯಿಸುತ್ತೇನೆ, ಅವಕಾಶ ದೊರೆತರೆ ತಕ್ಷಣ ಹೋಗಿ ರೈತರ ಸಮಸ್ಯೆಗಳನ್ನು ಮಂಡಿಸುತ್ತೇನೆ” ಎಂದು ತೀಳಿಸಿದರು.






