(ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರ (sugarcane farmers) ಹೋರಾಟ ಜೋರಾಗಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಅವರು ಕಬ್ಬಿನ ದರ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಧಾನಿ ನರೇಂದ್ರ ಮೋದಿಗೆ ತುರ್ತು ಭೇಟಿಗೆ ಅವಕಾಶ ನೀಡುವಂತೆ ಪತ್ರ ಬರೆದಿದ್ದಾರೆ. ಜೊತೆಗೆ, ಇಂದಿನ ಚರ್ಚಾ ಸಭೆಗೆ ಕೇಂದ್ರ ಮಂತ್ರಿಗಳಿಗೂ ಆಹ್ವಾನ ಕಳಿಸಿದ್ದಾರೆ.
ಕಬ್ಬಿನ ಎಫ್‌ಆರ್‌ಪಿ (FRP) ಬೆಲೆ ನಿಗದಿ ಮಾಡುವ ಅಧಿಕಾರ ಕೇಂದ್ರದದ್ದೇ ಎಂಬ ಕಾರಣಕ್ಕೆ, ರಾಜ್ಯ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಸಿಎಂ ಆರೋಪಿಸಿದ್ದಾರೆ.
ಇದೇ ವೇಳೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi) ಅವರು “ಈ ವಿಚಾರದಲ್ಲಿ ಕೇಂದ್ರದ ಪಾತ್ರವಿಲ್ಲ” ಎಂಬ ಹೇಳಿಕೆಯ ಮೂಲಕ ಮತ್ತೊಂದು ವಿವಾದದ ಅಲೆ ಎಬ್ಬಿಸಿದ್ದಾರೆ.
ಇಂದಿನ ಸಭೆಗೆ ಕೇಂದ್ರ ಸಚಿವರು (Union Ministers ) ಹಾಜರಾಗುವರಾ? ಎಂಬ ಕುತೂಹಲ ಸೃಷ್ಟಿಯಾಗಿದ್ದು, ತೆರಿಗೆ ವಿಚಾರದಲ್ಲಿ ನಡೆದ ಉದ್ವಿಗ್ನತೆಯ ಬಳಿಕ ಇದು ರಾಜ್ಯ-ಕೇಂದ್ರ ನಡುವೆ ಮತ್ತೊಂದು ಸಂಘರ್ಷದ ಅಂಶವಾಗಿ ಪರಿಣಮಿಸಿದೆ.
ಕೇಂದ್ರದ ವಿರುದ್ದ ಬೊಟ್ಟು ತೋರಿಸಿದ ಸಿದ್ದರಾಮಯ್ಯ






