ಬೆಂಗಳೂರು: ನಗರದ ಪ್ರತಿಷ್ಠಿತ ಶಾಲೆಗಳಿಗೆ ಇ-ಮೇಲ್ ಮೂಲಕ ಹುಸಿಬಾಂಬ್ ಬೆದರಿಕೆ (Fake Bomb Threat )ಹಾಕಿದ್ದ ಪ್ರಕರಣದಲ್ಲಿ ಬಂಧಿತಳಾಗಿರುವ ಗುಜರಾತ್ ಮೂಲದ ಮಹಿಳಾ ಟೆಕ್ಕಿ ರೆನಿ ಜೋಶಿಲ್ಡಾ (Reni Joshilda) ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಆರೋಪಿತೆ ವೈಯಕ್ತಿಕ ದ್ವೇಷ ಮತ್ತು ವಿಫಲ ಪ್ರೀತಿಯಿಂದ ಪ್ರೇರಿತಳಾಗಿ, ಜ್ಯೋತಿಷಿಯೊಬ್ಬರ ಸಲಹೆ(Astrologer’s Advice)ಯ ಮೇರೆಗೆ ಇಂತಹ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ಆರೋಪಿತೆ ರೆನಿ ಜೋಶಿಲ್ಡಾ (Reni Joshilda) ಪ್ರೀತಿಸುತ್ತಿದ್ದ ಪ್ರೀತಿ ಓನ್ ವೇ ಆಗಿದ್ದು, ಹಾಗೂ ಆ ಯುವಕ ದಿವಿಜ್ ಎಂಬಾತನಿಗೆ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದ ‘ಅವನಿಗೆ ಬುದ್ಧಿ ಕಲಿಸಬೇಕು’ ಎಂದು ಮೊದಲ ಪ್ರಯತ್ನದಲ್ಲಿ ದಿವಿಜ್‌ನ ಚಾರಿತ್ರ್ಯ (Character) ಸರಿಯಿಲ್ಲ ಎಂದು ಸುಳ್ಳು ಅಪವಾದ ಹೊರಿಸಿ, ಆತನನ್ನು ‘ರೇಪಿಸ್ಟ್’ ಮತ್ತು ‘ಹೆಣ್ಣುಬಾಕ’ ಎಂದು ಪ್ರಚಾರ ಮಾಡಲು ಯತ್ನಿಸಿದ್ದಳು.
ಆದರೆ ಈ ಪ್ರಯತ್ನ ವಿಫಲವಾದ ನಂತರ ರೆನಿ ಜ್ಯೋತಿಷಿಯೊಬ್ಬರ ಮೊರೆ ಹೋಗಿ, ಜ್ಯೋತಿಷಿಯ ಸಲಹೆಯ ಮೇರೆಗೆ ದಿವಿಜ್‌ನನ್ನು ಸಮಾಜದಲ್ಲಿ ‘ಭಯೋತ್ಪಾದಕ’ ಎಂದು ಬಿಂಬಿಸಲು ಸಂಚು ರೂಪಿಸಿದ್ದಳು.
ಇದೇ ಸಂಚಿನ ಭಾಗವಾಗಿ, ಯಾರಾದರೂ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದ ಇ-ಮೇಲ್ ಮಾಡಿದರೆ, ಪೊಲೀಸರು ತನಿಖೆ ವೇಳೆ ಸುಲಭವಾಗಿ ದಿವಿಜ್‌ನ ಐಪಿ ಅಡ್ರೆಸ್ ಅನ್ನು ಸೇರಿಸಿ ಆತನನ್ನು ಸಿಕ್ಕಿಹಾಕಬಹುದು ಎಂದು ಈ ಕೃತ್ಯಯನ್ನು ಆರೋಪಿ ಎಸಗಿದ್ದಾಳೆ ಎಂದು ತಿಳಿದುಬಂದಿದೆ.
ಸದ್ಯ ಪೊಲೀಸರು ಈ ವಿಚಾರದ ಕುರಿತು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. ಜ್ಯೋತಿಷಿ ಯಾರು ಮತ್ತು ಈ ಕೃತ್ಯದಲ್ಲಿ ಅವರ ಪಾತ್ರ ಏನು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.






