ಬೆಳಗಾವಿ: ಕಬ್ಬಿನ ಬೆಂಬಲ ಬೆಲೆ ಹೆಚ್ಚಿಸಲು ಆಗ್ರಹಿಸುತ್ತಿರುವ ಬೆಳೆಗಾರರ ಹೋರಾಟ ಇಂದು ಉಗ್ರ ಸ್ವರೂಪ ಪಡೆದಿದೆ. ಪರಿಸ್ಥಿತಿ ನಿಯಂತ್ರಣ ತಪ್ಪಿದ ಹಿನ್ನೆಲೆ ಪೊಲೀಸ (police)ರು ಲಾಠಿಚಾರ್ಜ್ (lathi-charge) ನಡೆಸಿ ಹೋರಾಟಗಾರರನ್ನು ಚದುರಿಸಿದರು.
ಬೆಳಗಾವಿ (belagavi)ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾವಿರಾರು ರೈತರು ಜಮಾಯಿಸಿ ಘೋಷಣೆ ಕೂಗಿದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತು. ಕಲ್ಲು ತೂರಾಟ ನಡೆದ ಪರಿಣಾಮ ಹಲವು ಪೊಲೀಸ್ ವಾಹನಗಳ ಗಾಜುಗಳು ಪುಡಿಪುಡಿಯಾದವು.
ಪೊಲೀಸರ ಮತ್ತು ರೈತರ ನಡುವೆ ಘರ್ಷಣೆ ಉಂಟಾಗಿ ಕೆಲ ಪೊಲೀಸರಿಗೆ ಗಾಯಗಳಾಗಿವೆ. ಉದ್ರಿಕ್ತ ರೈತರು ಸುಮಾರು ಒಂದು ಕಿಲೋಮೀಟರ್ (kilometer,) ತನಕ ಪೊಲೀಸರನ್ನೇ ಅಟ್ಟಾಡಿಸಿದ ಘಟನೆ ವರದಿಯಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಹಲವಾರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬೆಳಗಾವಿ ನಗರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.






