ಬೆಂಗಳೂರು ಗ್ರಾಮಾಂತರ: ಹೃದಯ ಕಲುಕುವ ಘಟನೆ ತಿರುಮಗೊಂಡನಹಳ್ಳಿ (Thirumagondanahalli) ಯಲ್ಲಿ ಬೆಳಕಿಗೆ ಬಂದಿದ್ದು, 5 ದಿನದ ಹಸುಗೂಸ (5-Day-Old Baby) ನ್ನು ಪಾಪಿಗಳು ಗಿಡಗಂಟಿಯ ನಡುವೆ ಎಸೆದುಹೋದರು.
ರಾತ್ರಿಯಿಡೀ ಚಳಿಯಲ್ಲಿ ನಡುಗುತ್ತ, ಅಳುತ್ತಿದ್ದ ಕಂದನ ಅಳುವ ಶಬ್ದವನ್ನು ಕೇಳಿದ ಸ್ಥಳೀಯ ಯುವಕರು ಬೆಳಿಗ್ಗೆ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಮಕ್ಕಳ ಸಹಾಯವಾಣಿ ಅಧಿಕಾರಿಗಳಿಗೆ ಮಗುವನ್ನು ಹಸ್ತಾಂತರಿಸಲಾಗಿದೆ.
ಇದೇ ವೇಳೆ ಮಗುವಿಗೆ ತಕ್ಷಣ ಹಾಲುಣಿಸಿ ಮಾನವೀಯತೆ ಮೆರೆದ ಮಹಿಳೆ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಘಟನೆಯ ನಂತರ, ಹಸುಗೂಸನ್ನು ಎಸೆದುಹೋದವರ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.






