Home State Politics National More
STATE NEWS

ಧರಣಿ ಹಿನ್ನೆಲೆ ಕಣ್ಣೀರಿಟ್ಟ MLA Yashwanthraya Gowda Patil: ರಾಜಕೀಯಕ್ಕೆ ಗುಡ್‌ ಬೈ?

Patil
Posted By: Meghana Gowda
Updated on: Nov 9, 2025 | 5:54 AM

ವಿಜಯಪುರ:  ಕಾರ್ಖಾನೆ ಎದುರು ಪ್ರತಿಭಟನಾ ನಿರತ ರೈತರ (Farmers)ನ್ನು ‘ರೈತರಲ್ಲ’ ಎಂದು ದರ್ಪದಿಂದ ಮಾತನಾಡಿದ್ದಕ್ಕೆ, ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಇಂಡಿ ಕಾಂಗ್ರೆಸ್ ಶಾಸಕ ಮತ್ತು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ್ ( MLA Yashwanthraya Gowda Patil) ಅವರು, ಮರುದಿನ ನಡೆದ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ. ರಾಜಕೀಯ ಜೀವನದ ಬಗ್ಗೆ ಹತಾಶೆ ವ್ಯಕ್ತಪಡಿಸಿರುವ ಶಾಸಕರು, ರಾಜಕೀಯ ನಿವೃತ್ತಿಯ ಸುಳಿವನ್ನು ನೀಡಿದ್ದಾರೆ.

ನವೆಂಬರ್ 7 (November 7) ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮರಗೂರು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿ ಸಭೆಯಲ್ಲಿ ಈ ಘಟನೆ ನಡೆದಿದೆ.

ರೈತರ (Farmers) ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡಿದ ಯಶವಂತರಾಯಗೌಡ ಪಾಟೀಲ್ ಅವರು ಗದ್ಗದಿತರಾಗಿ, ತೀವ್ರ ದುಃಖದಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನಾನು ಬಹಳ ಸಾರಿ ಒಂದು ತೀರ್ಮಾನ ತೆಗೆದುಕೊಳ್ಳುತ್ತಿದ್ದೆ.  ಸಾರ್ವಜನಿಕ ಜೀವನದಲ್ಲಿ ನಮ್ಮಂತಹವರು ಬಹಳ ದಿನ ಉಳಿಯುವುದಿಲ್ಲ. ನಿವೃತ್ತಿ ಜೀವನದತ್ತ ನಾವು ವಾಲಬೇಕೆಂದು.

ನಾನು ಏನು ಕಟ್ಟಿದ್ದೇನೆ, ಆ ಸ್ಥಳದಲ್ಲಿ ಧಿಕ್ಕಾರ ಅನ್ನಿಸಿಕೊಳ್ಳುವುದಂದ್ರೆ, ಯಾವ ಪುರುಷಾರ್ಥಕ್ಕೆ ನಾನು ಇರಬೇಕು? ನಾನು ಭೂಮಿ ಮೇಲಿಂದ ಹೋಗ್ಬೇಕು ಅನ್ನೋ ನಿರ್ಧಾರದಿಂದ ಇದ್ದೇನೆ ಅನ್ನುವುದು ಅಂತ್ಹೇಳಿ…” ಎಂದು ಹೇಳುತ್ತಾ ಮಾತು ನಿಲ್ಲಿಸಿದರು.

ಈ ಜಿಲ್ಲೆ ಮತ್ತು ಇಂಡಿ ತಾಲ್ಲೂಕಿನ ಅಭಿವೃದ್ಧಿಗೆ, ಅದರಲ್ಲೂ ಪ್ರಮುಖವಾಗಿ ನೀರಾವರಿ ಯೋಜನೆಗಳಿಗಾಗಿ (ರೇವಣಸಿದ್ದೇಶ್ವರ ಏತನೀರಾವರಿ) ತಾನು ಶ್ರಮಿಸಿದ್ದೇನೆ. ನನ್ನ ರಾಜಕಾರಣ ಜೀವನ ನನಗೆ ಸಂತೃಪ್ತಿಯಿದೆ. ಸಕ್ಕರೆ ಕಾರ್ಖಾನೆ 40 ವರ್ಷದಿಂದ ‘ಬಾರಾ ಕಮಾನ್’ ಇದ್ದುದ್ದು ‘ಗೋಲ ಗುಮ್ಮಟ’ ಮಾಡಿನಿ. ಅಸ್ತಿ ಪಂಜರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದೇನೆ  ಎಂದು ತಾವು ಮಾಡಿದ ಕೆಲಸವನ್ನು ನೆನಪಿಸಿಕೊಂಡು ದುಃಖಿತರಾದರು.

ಶಾಸಕರು ದುಃಖಿತರಾದಾಗ ಸಭೆಯಲ್ಲಿದ್ದ ರೈತರು (Farmers), “ಗೌಡ್ರು ದುಃಖಿಸಬೇಡಿ, ನಾವು ನಿಮ್ಮ ಪರವಾಗಿದ್ದೀವಿ, ಎಂದು ಸಾಂತ್ವನ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನೀವು ಇದ್ದೀರಿ ಅಂತಲೇ 40 ವರ್ಷ ರಾಜಕಾರಣದಲ್ಲಿ (40 years of political life,)ದ್ದೇನೆ. ಬಸವಣ್ಣನವರು, ಅಂಬೇಡ್ಕರ್ ಅವರಿಗೆ ಬಿಟ್ಟಿಲ್ಲ, ನನಗೇನು ಬಿಡುವವರಿದ್ದಾರೆ,” ಎಂದು ರಾಜಕೀಯ ಜೀವನದ ಕಹಿ ಸತ್ಯವನ್ನೂ ಹೇಳಿಕೊಂಡರು.

ಘಟನೆ ಹಿನ್ನೆಲೆ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಎದುರು ಬೆಂಬಲ ಬೆಲೆ ಘೋಷಿಸುವವರೆಗೂ ಕಾರ್ಖಾನೆ ಆರಂಭಿಸಬೇಡಿ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು, “ಧರಣಿ ನಿರತ ರೈತರು, ರೈತರಲ್ಲ. ಹತ್ತು ಸಾವಿರ ರೈತರನ್ನು ತಂದು ಫ್ಯಾಕ್ಟರಿ ಆರಂಭಿಸುತ್ತೇನೆ,” ಎಂದು ದರ್ಪದ ಮಾತುಗಳನ್ನಾಡಿದ್ದರು. ಈ ಹೇಳಿಕೆಗೆ ಗುರ್ಲಾಪುರ ರೈತ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಆಕ್ರೋಶದ ಹಿನ್ನೆಲೆಯಲ್ಲಿ ಮರುದಿನ ಸಭೆಯಲ್ಲಿ ಶಾಸಕರು ರಾಜಕೀಯ ನಿವೃತ್ತಿಯ ಬಗ್ಗೆ ಮಾತುಗಳನ್ನಾಡಿ ಗದ್ಗದಿತರಾದರು.

Shorts Shorts