ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ರಜಿನಿ (Rajini) ಅವರು ಇಂದು (ನವೆಂಬರ್ 10, 2025) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರು ತಮ್ಮ ಬಹುಕಾಲದ ಗೆಳೆಯ ಅರುಣ್ ಗೌಡ (Arun Gowda) ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.
ರಜಿನಿ (Rajini) ಮತ್ತು ಅರುಣ್ ಗೌಡ ಅವರ ವಿವಾಹ ಸಮಾರಂಭವು ಇಂದು ಬೆಳಗ್ಗೆ 10:30ಕ್ಕೆ ಶುಭ ಮುಹೂರ್ತ ನಿಗದಿಯಾಗಿದ್ದು, ಮದುವೆ (wedding) ಯು ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದೆ.
ರಜಿನಿ (Rajini) ಅವರು ‘ಅಮೃತ ವರ್ಷಿಣಿ’ (Amrutha Varshini)ಧಾರಾವಾಹಿಯ ಮೂಲಕ ಮನೆ ಮಾತಾದವರು. ಪ್ರಸ್ತುತ, ಅವರು ‘ಈಗ ನೀ ಇರಲು ಜೊತೆಯಲ್ಲಿ’ (Iga Nee Irali Joteyalli) ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ನಟಿ ರಜಿನಿ ಮತ್ತು ಅರುಣ್ ಗೌಡ (Arun Gowda) ಇಬ್ಬರೂ ಸೋಷಿಯಲ್ ಮೀಡಿಯಾ(social media)ದಲ್ಲಿ ತಮ್ಮ ಡಾನ್ಸ್ ವಿಡಿಯೋಗಳ ಮೂಲಕವೂ ಜನಪ್ರಿಯತೆ ಗಳಿಸಿದ್ದಾರೆ.






