ಬೆಂಗಳೂರು: ಬೆಂಗಳೂರಿ(Bengaluru)ನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ನೀಡುತ್ತಿರುವ ಮತ್ತು ಅವರು ಮೋಜು-ಮಸ್ತಿ ಮಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ನಟ ದರ್ಶನ್ (Darshan) ಅವರ ಆಪ್ತ ನಟ ಧನ್ವೀರ್ (Dhanveer) ಅವರನ್ನು ಸಿಸಿಬಿ (CCB – Central Crime Branch) ವಿಚಾರಣೆ ನಡೆಸಿದೆ.
ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ವಿಡಿಯೋ ವೈರಲ್ (Video Viral) ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ನಟ ಧನ್ವೀರ್ ಅವರನ್ನು ನಿನ್ನೆಯಿಂದ ವಿಚಾರಣೆ ನಡೆಸುತ್ತಿದ್ದಾರೆ. ವಿಡಿಯೋವನ್ನು ಮೊದಲು ರಿಲೀಸ್ ಮಾಡಿದ್ದು ನಟ ದರ್ಶನ್ ಅವರ ಆಪ್ತರಾದ ನಟ ಧನ್ವೀರ್ (Dhanveer) ಎಂಬ ಶಂಕೆ ವ್ಯಕ್ತವಾಗಿದೆ.
ಸಿಸಿಬಿ ಅಧಿಕಾರಿಗಳು ನಟ ಧನ್ವೀರ್ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದು, ವಿಡಿಯೋದ ಮೂಲ ಮತ್ತು ಬಿಡುಗಡೆಯ ಬಗ್ಗೆ ಮಾಹಿತಿ ಪಡೆಯಲು ಅದನ್ನು ರಿಟ್ರೀವ್ (Retrieve) ಗಾಗಿ FSL (Forensic Science Laboratory) ಗೆ ರವಾನಿಸಿದ್ದಾರೆ.
ಜೈಲಿನಲ್ಲಿನ ಅಕ್ರಮಗಳ ಕುರಿತು ಗೃಹ ಸಚಿವರು ಈಗಾಗಲೇ ಗಂಭೀರ ಕ್ರಮದ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ, ಈ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿಯ ಸುತ್ತ ತನಿಖೆ ಸುತ್ತಿರುವುದು ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಕುತೂಹಲ ಮೂಡಿಸಿದೆ.






