Home State Politics National More
STATE NEWS

D.K. Shivakumar ಈ ತಿಂಗಳಲ್ಲೇ ಮುಖ್ಯಮಂತ್ರಿ ಆಗಲಿದ್ದಾರೆ: ಭವಿಷ್ಯ ನುಡಿದ ಗಡೇ ದುರ್ಗಾದೇವಿ ಅರ್ಚಕರು!

D k shivakumar reaction about November kranti
Posted By: Meghana Gowda
Updated on: Nov 10, 2025 | 12:09 PM

ಯಾದಗಿರಿ: ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಮುಖ್ಯಮಂತ್ರಿ (Chief Minister) ಪಟ್ಟ ಒಲಿಯುವ ಯೋಗವಿದೆ ಎಂದು ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದ ಗಡೇ ದುರ್ಗಾದೇವಿ ದೇವಾಲಯದ ಅರ್ಚಕರಾದ ಮಹಾದೇವಪ್ಪ ಪೂಜಾರಿ (Mahadevappa Poojari ) ಅವರು ಭವಿಷ್ಯ ನುಡಿದಿದ್ದಾರೆ.

ಅರ್ಚಕರ ಪ್ರಕಾರ, ನವೆಂಬರ್ (November) ತಿಂಗಳಿನಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ (CM) ಆಗುವ ಯೋಗವಿದೆ. ಈ ಯೋಗಕ್ಕೆ ಗಡೇ ದುರ್ಗಾದೇವಿ (Gade Durgadevi Temple) ಯ ಆಶೀರ್ವಾದ ಮತ್ತು ಕೃಪೆ ಎಂದಿದ್ದಾರೆ. ದೇವಿಯ ಅನುಗ್ರಹದಿಂದಲೇ ಅವರಿಗೆ ಸಿಎಂ ಆಗುವ ಫಲ ದೊರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಗಡೇ ದುರ್ಗಾದೇವಿಯ ಪರಮ ಭಕ್ತರಾಗಿದ್ದು, ಈ ಹಿಂದೆ ಕಷ್ಟದ ದಿನಗಳು ಬಂದಾಗ ದೇವಿಯ ಮೊರೆ ಹೋಗಿದ್ದರು. ಸಂಕಷ್ಟದಿಂದ ಪಾರಾದ ನಂತರ ಅವರು ದೇವಿಯ ದರ್ಶನ ಪಡೆದಿದ್ದರು ಎಂದು ತಿಳಿದುಬಂದಿದೆ.

ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ (Chief Minister) ಸ್ಥಾನದ ಆಕಾಂಕ್ಷೆಯಿರುವ ಹಿನ್ನೆಲೆಯಲ್ಲಿ, ಅರ್ಚಕರ ಈ ಭವಿಷ್ಯದ ಮಾತುಗಳು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿವೆ.

Shorts Shorts