Home State Politics National More
STATE NEWS

ತಿರುಪತಿ ಪ್ರಸಾದದಲ್ಲಿ ನಕಲಿ ತುಪ್ಪ ಬಳಕೆ: SIT ತನಿಖೆಯಲ್ಲಿ ದೃಢ!

Tirupati laddu
Posted By: Meghana Gowda
Updated on: Nov 10, 2025 | 7:54 AM

ತಿರುಪತಿ: ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ ದೇವಸ್ಥಾನದ (Tirupati Temple) ಲಡ್ಡು ಪ್ರಸಾದ ತಯಾರಿಕೆಗಾಗಿ 2019 ರಿಂದ 2024ರವರೆಗೆ ಬರೋಬ್ಬರಿ ₹250 ಕೋಟಿ ರೂಪಾಯಿ ಮೌಲ್ಯದ ನಕಲಿ ತುಪ್ಪ (Fake Ghee) ವನ್ನು ಪೂರೈಸಿದ್ದು, ಸುಪ್ರೀಂಕೋರ್ಟ್ ನೇತೃತ್ವದಲ್ಲಿ ರಚಿಸಲಾದ ಸಿಬಿಐ (CBI) ನೇತೃತ್ವದ ಎಸ್ಐಟಿ (SIT) ತನಿಖೆಯಲ್ಲಿ ದೃಢಪಟ್ಟಿದೆ. ಈ ಅಕ್ರಮದಲ್ಲಿ ಉತ್ತರಾಖಂಡದ ಒಂದು ಡೈರಿ ಸೇರಿದಂತೆ ಬಹು ರಾಜ್ಯದ ಸಂಸ್ಥೆಗಳು ಭಾಗಿಯಾಗಿರುವುದು ಬಯಲಾಗಿದೆ.

ಕಳೆದ ಐದು ವರ್ಷಗಳಲ್ಲಿ 68 ಲಕ್ಷ ಕೆಜಿಯಷ್ಟು (6.8 ಮಿಲಿಯನ್ ಕೆಜಿ) ನಕಲಿ ತುಪ್ಪವನ್ನು ತಿಮ್ಮಪ್ಪನ ಪ್ರಸಾದ ತಯಾರಿಸುವುದಕ್ಕೆ, ಉತ್ತರಾಖಂಡ್‌ನ ರೂಡ್ಕೀ ಮೂಲದ ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿ (Bhole Baba Organic Dairy) ಈ ಹಗರಣದ ಪ್ರಮುಖ ಸೂತ್ರಧಾರವಾಗಿತ್ತು. ಈ  ಡೈರಿ ರೈತರಿಂದ ಹಾಲು ಸಂಗ್ರಹಿಸಿಲ್ಲ, ಅಸಲಿ ತುಪ್ಪವನ್ನು ಉತ್ಪಾದನೆಯನ್ನೂ ಮಾಡಿಲ್ಲ. ಬದಲಿಗೆ, ಅದು ಕೇವಲ ಕೃತಕ (Synthetic) ತುಪ್ಪ ತಯಾರಿಕಾ ಘಟಕವಾಗಿ ಕಾರ್ಯನಿರ್ವಹಿಸುತ್ತಿತ್ತು.

ಈ ಡೈರಿಯು ಪಾಮ್ ಆಯಿಲ್, ಪಾಮ್ ಕೆರನಲ್ ಆಯಿಲ್ ಮತ್ತು ಹೈಡೋ ಜೆನೆಟೆಡ್ ಫ್ಯಾಟ್ಸ್‌ನಂತಹ ರಾಸಾಯನಿಕಗಳನ್ನು ಬಳಸಿ ನಕಲಿ ತುಪ್ಪವನ್ನು ತಯಾರಿಸುತ್ತಿತ್ತು. ಅಸಲಿ ತುಪ್ಪದಂತೆ ಕಾಣಲು ಮತ್ತು ವಾಸನೆ ಬರಲು ಬೇಟಾ ಕರಟೇನಿ ಮತ್ತು ಫೀ ಎಸೆನ್ಸ್ ಅನ್ನು ಸೇರಿಸಲಾಗುತ್ತಿತ್ತು ಎಂದು ಬೆಳಕಿದೆ ಬಂದಿದೆ.

2022ರಲ್ಲೇ ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿಯನ್ನು ಟಿಟಿಡಿ ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿತ್ತು. ಆದರೂ, ಈ ಡೈರಿಯು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸಿ ಅಕ್ರಮವಾಗಿ ತುಪ್ಪ ಪೂರೈಕೆಯನ್ನು ಮುಂದುವರಿಸಿದೆ. ಹಾಗೂ ನೇರವಾಗಿ ತುಪ್ಪವನ್ನು ಪೂರೈಸುವ ಬದಲು, ಆಂಧ್ರಪ್ರದೇಶದ ವೈಷ್ಣವಿ ಡೈರಿ (Vishnavi Dairy) ಮತ್ತು ತಮಿಳುನಾಡಿನ ಎ.ಆರ್. ಡೈರಿ (A.R. Dairy) ಪ್ರಾಡಕ್ಟ್ ನಂತಹ ಇತರ ಡೈರಿಗಳ ಮೂಲಕ ನಕಲಿ ತುಪ್ಪವನ್ನು ಟಿಟಿಡಿಗೆ ಪೂರೈಸಿ ಅಕ್ರಮ ನಡೆಸಿದೆ.

ಈ ನಕಲಿ ತುಪ್ಪದಿಂದಲೇ ತಿಮ್ಮಪ್ಪನ ಭಕ್ತರಿಗೆ ಅತ್ಯಂತ ಪವಿತ್ರವಾದ ಲಡ್ಡು ಪ್ರಸಾದವನ್ನು ತಯಾರಿಸಿ ವಿತರಿಸಲಾಗುತ್ತಿತ್ತು ಎಂಬುದು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟುಮಾಡಿದೆ. ಎಸ್‌ಐಟಿ ತನಿಖೆ ಮುಂದುವರೆದಿದ್ದು, ಈ ಹಗರಣದಲ್ಲಿ ಟಿಟಿಡಿಯೊಳಗಿನ ಕೆಲ ಅಧಿಕಾರಿಗಳ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.

Shorts Shorts