ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರವಾಗಿ ನಟ ದರ್ಶನ್ (Darshan) ಮತ್ತು ಅವರ ಆಪ್ತರಿಗೆ ಸಂಬಂಧಿಸಿದಂತೆ ಇಂದು ನಡೆಯಬೇಕಿದ್ದಾ ವಿಚಾರಣೆಯನ್ನು ನಗರದ 64ನೇ ಸಿಸಿಹೆಚ್ (64th CCH Court) ಕೋರ್ಟ್ ನವೆಂಬರ್ 19 ಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ 5 ಸಾವಿರಕ್ಕೂ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕಿದೆ. ಇಷ್ಟು ಬೃಹತ್ ಪ್ರಮಾಣದ ದಾಖಲೆಗಳನ್ನು ಪರಿಶೀಲಿಸಿ ಸಿದ್ಧತೆ ನಡೆಸಲು ಸಮಯದ ಅವಶ್ಯಕತೆಯಿದೆ. ಹೀಗಾಗಿ ಇನ್ನೂ 15 ದಿನಗಳ ಕಾಲ ಸಮಯಾವಕಾಶ ಬೇಕೆಂದು ವಕೀಲರು ಕೋರ್ಟ್‌ಗೆ ಮನವಿ ಸಲ್ಲಿಸಿದರು.
ವಕೀಲರ ಕೋರಿಕೆಯನ್ನು ಪುರಸ್ಕರಿಸಿದ 64ನೇ ಸಿಸಿಹೆಚ್ ಕೋರ್ಟ್(64th CCH Court), ವಿಚಾರಣೆಯನ್ನು ನವೆಂಬರ್ 19 ಕ್ಕೆ ಮುಂದೂಡಿದೆ. ಈ ವಿಚಾರಣೆ ವೇಳೆ ನಟ ದರ್ಶನ್ ಅವರು ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕ ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ಮುಂದೂಡಿಕೆಯಾದ ಕಾರಣ, ಸೆಷನ್ ಕೋರ್ಟ್‌ನ ಮುಂದಿನ ಆದೇಶದವರೆಗೆ ಆರೋಪಿಗಳು ಕಾಯಬೇಕಾಗಿದೆ.






